ಮಂಗಳೂರು: ನಗರದ ಬಿಜೈಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ಏಳನೇ ಮಹಡಿಯಿಂದ ಬಿದ್ದು, ಉತ್ತರ ಭಾರತದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಸದ್ದಾಂ ಹುಸೇನ್ (30) ಎಂಬವರೇ ಗಾಯಗೊಂಡವರರಾಗಿದ್ದು, ಇವರು ಕಟ್ಟಡದ ಏಳನೇ ಮಹಡಿಯಲ ಬಾಲ್ಕನಿಯ ಕೆಲಸ ಪೂರ್ಣಗೊಳಿಸಿ ಕೆಳಗೆ ಇಳಿಯುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಉರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಕಾಮಗಾರಿ ನಡೆಸಿ, ಕಾರ್ಮಿಕನ ಸಾವಿಗೆ ಕಾರಣರಾಗಿದ್ದಾರೆನ್ನಲಾದ ಕಂಟ್ರಾಕ್ಟರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Kshetra Samachara
13/02/2021 03:50 pm