ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುರ್ಡೇಶ್ವರ: ಶ್ರೀರಾಮ‌ಸೇನೆ ರಾಜ್ಯ ಉಪಾಧ್ಯಕ್ಷನಿಂದ ಹಫ್ತಾ ವಸೂಲಿ, ಬೆದರಿಕೆ; ನೆರವಿಗೆ ಮೊರೆ

ಭಟ್ಕಳ: ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕನನ್ನು ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಮುರ್ಡೇಶ್ವರದ ನಾಗರಿಕರು ಇಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಜಯಂತ ನಾಯ್ಕ ಮುರ್ಡೇಶ್ವರದಲ್ಲಿ ಹಫ್ತಾ ವಸೂಲಿ ಮಾಡಲು ಮುಂದಾಗಿದ್ದು, ಮುರ್ಡೇಶ್ವರದ ಕಡಲ ತೀರದಲ್ಲಿರುವ ಬಡಪಾಯಿ ಗೂಡಂಗಡಿಯವರು ಹಫ್ತಾ ನೀಡುವಂತೆ ಬೆದರಿಕೆ ಒಡ್ಡಿದ್ದಾನೆ. ಇದರಿಂದ ಬಡ ಶ್ರಮಜೀವಿಗಳಿಗೆ ಹಾಗೂ ಪ್ರವಾಸಿಗರಿಗೂ ಜೀವ ಭಯ ಇದೆ‌ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈತ ತನಗೆ ಉನ್ನತ ರಾಜಕಾರಣಿಗಳ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಿದ್ದು, ಅವರ ಕುಮ್ಮಕ್ಕಿನಿಂದಲೇ ಈತ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ದೂರಲಾಗಿದೆ.

ಜಯಂತ ನಾಯ್ಕನ ಮೇಲೆ ಈಗಾಗಲೇ ಅನೇಕ ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆ ಗಡೀಪಾರಿಗೆ ಆದೇಶ ಕೂಡ ಆಗಿತ್ತು ಎಂದೂ ಮನವಿಯಲ್ಲಿ ತಿಳಿಸಲಾಗಿದೆ. ಸಹಾಯಕ ಆಯುಕ್ತ ಭರತ್ ಎಸ್. ಮನವಿ ಸ್ವೀಕರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

10/02/2021 01:41 pm

Cinque Terre

11.73 K

Cinque Terre

0

ಸಂಬಂಧಿತ ಸುದ್ದಿ