ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದರೋಡೆಗೆ ಸಂಚು; 6 ಲಕ್ಷ ರೂ. ಸೊತ್ತು ಸಹಿತ ಐವರ ಬಂಧನ

ಮಂಗಳೂರು: ನಗರದ ಹೊರವಲಯದಲ್ಲಿರುವ ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಬಜಪೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ,

ಆರು ಲಕ್ಷ ರೂ.ನ ಸೊತ್ತು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಮುಲ್ಲಾರ್‌ಪಟ್ನ ನಿವಾಸಿಗಳಾದ ಅಬ್ದುಲ್ ಹಕೀಂ (33), ಅಬ್ದುಲ್ ರಝಾಕ್ (45), ಮುಹಮ್ಮದ್ ರಫೀಕ್ (42), ಮುಹಮ್ಮದ್ ಮನ್ಸೂರ್ (29), ಇರ್ಫಾನ್ (31) ಬಂಧಿತರು.

ಆರೋಪಿಗಳು ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಗಂಜಿಮಠ ಕೈಗಾರಿಕಾ ಪ್ರದೇಶಕ್ಕೆ ದಾಳಿ ನಡೆಸಿದ್ದಾರೆ. ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ‌. ಬಳಿಕ ಅವರನ್ನು ವಿಚಾರಣೆ ನಡೆಸಿದಾಗ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿರುವ ಒಂದು ಪಿಕ್‌ಅಪ್ ವಾಹನ, ಎರಡು ಬೈಕ್ ಗಳು, ಕತ್ತಿ, ಚೂರಿ, ಕಬ್ಬಿಣದ ಹುಕ್, ದೊಣ್ಣೆ, ಮೆಣಸಿನ ಹುಡಿ ಪ್ಯಾಕೆಟ್, ನಾಲ್ಕು ಮೊಬೈಲ್ ಗಳು, ಎರಡು ದನಗಳು ಮತ್ತು 15 ಸಾವಿರ ರೂ. ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತಿನ ಮೌಲ್ಯ ಆರು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಬಂಧಿತರು ಮೂಡುಬಿದಿರೆ, ಎಡಪದವು, ಮಿಜಾರು, ಗಂಜಿಮಠ ಕಡೆಗಳಲ್ಲಿ ದನ ಕಳವು ಮಾಡುತ್ತಿದ್ದು, ಈ ವೇಳೆ ಯಾರಾದರೂ ಪ್ರತಿರೋಧ ಮಾಡಿದರೆ ಅವರ ಕಣ್ಣಿಗೆ ಮೆಣಸಿನ ಹುಡಿ ಎರಚುವುದು, ಚೂರಿ ತೋರಿಸಿ ಬೆದರಿಸುತ್ತಿರುವುದಾಗಿ ಆರೋಪಿಗಳು ತನಿಖೆ ವೇಳೆ ಬಾಯಿ ಬಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇವರ ತಂಡದಲ್ಲಿದ್ದ ಅದ್ಯಪಾಡಿ ಮನ್ಸೂರ್, ತೋಡಾರು ಫಾಯಿಜ್‌ಬೆಬ್ಬೆ ಫೈಜ್, ಜುಬೈರ್ ತೋಡಾರು, ಇರ್ಫಾದ್ ಮತ್ತು ನೌಫಲ್ ಗಂಜಿಮಠ ಎಂಬವರು ದಾಳಿ ವೇಳೆ ಪರಾರಿಯಾಗಿದ್ದಾರೆ. ಇವರ ಪತ್ತೆಗಾಗಿ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಇತ್ತೀಚೆಗೆ ಬಡಗ ಎಡಪದವು ಗ್ರಾಮದ ವರುಣ್ ತಂತ್ರಿ ಮತ್ತು ಮೋಹಿನಿ ಎಂಬವರ ಎರಡು ದನಗಳ ಕಳವು, ಗಂಜಿಮಠ ಹೊಸನ್ನ ಡಿಸಿಲ್ವ ಅವರ ಮೂರು ದನಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/01/2021 01:08 pm

Cinque Terre

10.33 K

Cinque Terre

1

ಸಂಬಂಧಿತ ಸುದ್ದಿ