ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಮದ್ವೆ ನಿಶ್ಚಯವಾಗಿದ್ದ ಯುವತಿಗೆ ತಾಳಿ ಕಟ್ಟಿ ಅಪಹರಿಸಿದ ಯುವಕ

ಪುತ್ತೂರು: ಪುತ್ತೂರಿನ ಛತ್ರವೊಂದರಲ್ಲಿ ಜನವರಿ 25ರಂದು ವಿವಾಹ ನಿಗದಿಯಾಗಿದ್ದ ಯುವತಿಗೆ ಯುವಕನೊಬ್ಬ ಬಲವಂತವಾಗಿ ತಾಳಿ ಕಟ್ಟಿ ಅಪಹರಿಸಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ಯುವತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕನೊಂದಿಗೆ ವಿವಾಹ ನಿಗದಿಯಾಗಿತ್ತು. ಪುತ್ತೂರಿನ ಸಭಾಭವನದಲ್ಲಿ ಜನವರಿ 25ರಂದು ಮದುವೆಗೆ ಎರಡೂ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಈ ನಡುವೆ ಅರೆಕೆರೆ ಗ್ರಾಮದ ಸತೀಶ್ ತನ್ನ ಗೆಳೆಯರ ಜತೆ ಜನವರಿ 21ರಂದು ಯುವತಿಯ ಮನೆಗೆ ಬಂದು ಆಕೆಗೆ ಬಲವಂತವಾಗಿ ತಾಳಿಕಟ್ಟಿ ಬೆದರಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ಯುವತಿಯ ತಾಯಿ ದೂರಿದ್ದಾರೆ.

ಈ ಸಂಬಂಧ ಯುವತಿಯ ತಾಯಿ ಸಕಲೇಶಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳಿಗೆ ಇಷ್ಟವಿಲ್ಲದಿದ್ದರೂ ಬೆದರಿಸಿ ಬಲವಂತವಾಗಿ ತಾಳಿ ಕಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

24/01/2021 09:10 am

Cinque Terre

9.02 K

Cinque Terre

3

ಸಂಬಂಧಿತ ಸುದ್ದಿ