ಬಂಟ್ವಾಳ: ಪತ್ರಿಕೆಯೊಂದರ ವರದಿಗಾರರೊಬ್ಬರ ಫೇಸ್‌ಬುಕ್ ಅಕೌಂಟ್ ಅನ್ನೇ ಹ್ಯಾಕ್ ಮಾಡಿ, ಅವರ ಫ್ರೆಂಡ್ ಲಿಸ್ಟ್‌ನಲ್ಲಿರುವವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣವೊಂದು ನಡೆದಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಪುಂಜಾಲಕಟ್ಟೆಯ ಪತ್ರಕರ್ತ ರತ್ನದೇವ್ ಅವರ ಫೇಸ್‌ಬುಕ್ ಖಾತೆಯಿಂದ ಅದರ ಫ್ರೆಂಡ್ ಲಿಸ್ಟ್‌ನಲ್ಲಿರುವವರಿಗೆ 'ನನಗೆ ಅರ್ಜೆಂಟ್ ಆಗಿ ಹಣ ಬೇಕು. ನಾಳೆ ಮರಳಿಸುತ್ತೇನೆ. ನಿಮ್ಮಲ್ಲಿ ಗೂಗಲ್ ಪೇ ಅಥವಾ ಫೋನ್ ಪೇ ಇದ್ದರೆ ಹಣ ಕಳುಹಿಸಿ. ನನ್ನ ಸ್ನೇಹಿತನ ನಂಬರ್ ನೀಡುತ್ತೇನೆ. ಅದಕ್ಕೆ ಕಳುಹಿಸಿ, ನಾಳೆ ಮರಳಿಸುತ್ತೇನೆ' ಎಂದು ಸಂದೇಶವನ್ನು ಹ್ಯಾಕರ್ ಕಳುಹಿಸುತ್ತಾರೆ.
ಅವರ ಪತ್ರಕರ್ತ ಸ್ನೇಹಿತರಿಗೆ ಈ ರೀತಿಯ ಸಂದೇಶಗಳು ಬರತೊಡಗಿದ ಹಿನ್ನೆಲೆಯಲ್ಲಿ ಕೂಡಲೇ ಅಲರ್ಟ್ ಆದ ರತ್ನದೇವ್ ಸ್ನೇಹಿತರ ಸಹಾಯದಿಂದ ಎಲ್ಲರಿಗೂ ಈ ಕುರಿತು ಜಾಗೃತಿಯ ಸಂದೇಶ ನೀಡಿದ್ದಾರೆ. ವಿಷಯವನ್ನು ಪೊಲೀಸರಿಗೂ ತಿಳಿಸಲಾಗಿದ್ದು, ಹ್ಯಾಕರ್‌ನ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಪತ್ರಕರ್ತರ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗುತ್ತಿರುವ ಕುರಿತು ವರದಿಗಳು ಬಂದಿದ್ದವು.
Kshetra Samachara
23/01/2021 10:03 pm