ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಮದುವೆ ಆಗೋದಾಗಿ ನಂಬಿಸಿ ವಂಚನೆ: ಯುವಕ ನ್ಯಾಯಾಂಗ ವಶಕ್ಕೆ

ಕಡಬ: ತಾಲೂಕಿನ ಸುಬ್ರಹ್ಮಣ್ಯದ ರಕ್ಷಿತ್ ಎಂಬಾತ ಫೇಸ್‌ಬುಕ್ ಮೂಲಕ ಪರಿಚಯವಾಗಿ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದು, ನಂತರದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಪಾತ ಮಾಡಿಸಿದ್ದಲ್ಲದೆ, ಈಗ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡುತ್ತಿದ್ದಾನೆಂದು ತುಮಕೂರಿನ ವಸಂತಾ ಎಂಬ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

ಯುವತಿಯ ಈ ದೂರಿನ ಮೇರೆಗೆ ಕ್ರಮ ಕೈಗೊಂಡ ಪೊಲೀಸರು ರಕ್ಷಿತ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾಗಿ ತಿಳಿದು ಬಂದಿದೆ.

Edited By : Nagaraj Tulugeri
Kshetra Samachara

Kshetra Samachara

19/01/2021 07:34 am

Cinque Terre

14.96 K

Cinque Terre

9

ಸಂಬಂಧಿತ ಸುದ್ದಿ