ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಅಂಡವೇರ್ ನಲ್ಲಿ ಅಡಗಿಸಿದ್ದ 2.15 ಕೆ.ಜಿ. ಅಕ್ರಮ ಚಿನ್ನ ಸಹಿತ ಇಬ್ಬರ ಸೆರೆ

ಮಂಗಳೂರು: ಅಂಡರ್ ವೇರ್ ನಲ್ಲಿ ಚಿನ್ನ ಅಡಗಿಸಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ‌. ಬಂಧಿತರಿಂದ 1.09 ಕೋಟಿ ರೂ. ಮೌಲ್ಯದ 2.154 ಕೆ.ಜಿ. 24 ಕ್ಯಾರೆಟ್ ಪರಿಶುದ್ಧ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಫೈಜಲ್ ತೊಟ್ಟಿ ಮೇಲ್ಪರಂಬ (37) ಮತ್ತು ಮುಹಮ್ಮದ್ ಸುಹೈಬ್ ಮುಗು (31) ಬಂಧಿತರು.

ಈ ಇಬ್ಬರು ಆರೋಪಿಗಳು ಶಾರ್ಜಾದಿಂದ ಏರ್ ಇಂಡಿಯಾ ವಿಮಾನದಲ್ಲಿ ನಿನ್ನೆ ಬಂದಿದ್ದು, ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಇವರು ಒಳ ಉಡುಪಿನಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿರಿಸಿ ಸಾಗಾಟ ಮಾಡುತ್ತಿದ್ದರು.

Edited By : Nagaraj Tulugeri
Kshetra Samachara

Kshetra Samachara

15/01/2021 11:25 am

Cinque Terre

10.62 K

Cinque Terre

0

ಸಂಬಂಧಿತ ಸುದ್ದಿ