ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ಬಾಡಿಗೆ ಬಾಕಿ ವಿದ್ಯಾರ್ಥಿಗಳನ್ನು ಒಳಗಿರಿಸಿ ಬೀಗ ಜಡಿದ ಮಾಲೀಕ

ಮುಲ್ಕಿ: ಮುಲ್ಕಿಯ ಪ್ರತಿಷ್ಠಿತ ನರ್ಸಿಂಗ್ ಕಾಲೇಜು ಹಾಸ್ಟೆಲಿನ ಆಡಳಿತ ಮಂಡಳಿ ಕಳೆದ ಕೆಲ ತಿಂಗಳಿಂದ ಬಾಡಿಗೆ ಕೊಡಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಹಾಸ್ಟೆಲಿನ ಒಳಗಡೆ ಇರುವಾಗಲೇ ಏಕಾಏಕಿ ಕಟ್ಟಡದ ಮಾಲೀಕರು ಬೀಗ ಜಡಿದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು ಬಳಿಕ ಪೊಲೀಸರ ಸೂಚನೆ ಮೇರೆಗೆ ಕಟ್ಟಡದ ಮಾಲೀಕರು ಬೀಗ ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಲ್ಕಿ ಬಿಲ್ಲವ ಸಂಘದ ಬಳಿಯಿರುವ ಹಾಸ್ಟೆಲಿನಲ್ಲಿ ಪ್ರತಿಷ್ಠಿತ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ವಾಸವಾಗಿದ್ದರು.ಕಳೆದ ಕೆಲವು ತಿಂಗಳ ಹಿಂದೆ ಕೊರೋನಾ ಮಹಾಮಾರಿಯ ಬಳಿಕ ಕಾಲೇಜಿಗೆ ರಜೆ ಘೋಷಣೆಯಾಗಿದ್ದು ಹಾಸ್ಟೆಲಿನ ಬಾಡಿಗೆ ಕೂಡ ಮಾಲೀಕರಿಗೆ ಕೊಡದೆ ಬಾಕಿಯಾಯ್ತು.

ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಈ ನಡುವೆ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ಕಾಲೇಜನ್ನು ಜನವರಿಯಿಂದ ಪುನರಾರಂಭಿಸಿದ್ದು ಮಂಗಳವಾರ ಸುಮಾರು 50 ವಿದ್ಯಾರ್ಥಿಗಳು ವಿವಿಧ ರಾಜ್ಯಗಳಿಂದ ಕಾಲೇಜಿಗೆ ಆಗಮಿಸಿದ್ದರು. ಆದರೆ ಮಂಗಳವಾರ ರಾತ್ರಿ ಕಾಲೇಜಿನ ವಿದ್ಯಾರ್ಥಿ ನಿಲಯದ ರೂಮಿನಲ್ಲಿ ವಿದ್ಯಾರ್ಥಿಗಳಿದ್ದ ವೇಳೆಯಲ್ಲಿ ಏಕಾಏಕಿ ಬಂದ ಕಟ್ಟಡದ ಮಾಲೀಕರು ಬೀಗ ಜಡಿದಿದ್ದಾರೆ. ಹಾಗೆಯೇ ಹಾಸ್ಟೆಲಿನ ಶೌಚಾಲಯಕ್ಕೆ ಬೀಗ ಜಡಿದಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಆತಂಕಗೊಂಡ ವಿದ್ಯಾರ್ಥಿಗಳು ಕೂಡಲೇ ಕಾಲೇಜಿನ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಕಟ್ಟಡ ಮಾಲೀಕರಿಗೆ ಬೀಗ ತೆರವುಗೊಳಿಸುವಂತೆ ವಿನಂತಿಸಿದರು ಅಲ್ಲದೆ ಸ್ಥಳೀಯ ನಗರಪಂಚಾಯತ್ ಸದಸ್ಯರಿಗೂ ಈ ಬಗ್ಗೆ ಮನವಿ ಸಲ್ಲಿಸಿದರರೂ ಕಟ್ಟಡದ ಮಾಲೀಕ ಕ್ಯಾರೇ ಎನ್ನದೆ ಉಡಾಫೆಯಿಂದ ವರ್ತಿಸಿದಾಗ ಕೂಡಲೇ ಮುಲ್ಕಿ ಪೊಲೀಸರಿಗೆ ದೂರು ನೀಡಲಾಯಿತು.

ಮುಲ್ಕಿ ಸರ್ಕಲ್ ಇನ್ಸ್ ಪೆಕ್ಟರ್ ಕುಸುಮಧರ ಕಾರ್ಯಾಚರಣೆ ನಡೆಸಿ ಬೀಗ ತೆರವುಗೊಳಿಸುವಂತೆ ಸೂಚಿಸಿ ಬಾಡಿಗೆ ವಿವಾದವನ್ನು ನ್ಯಾಯಾಲಯದಲ್ಲಿ ಬಗೆ ಹರಿಸಬೇಕಾಗಿ ಸೂಚನೆ ನೀಡಿದರು.

ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಕೂಡಲೇ ಕಟ್ಟಡದ ಮಾಲೀಕರು ವಿದ್ಯಾರ್ಥಿನಿಲಯಕ್ಕೆ ಹಾಕಿದ ಬೀಗವನ್ನು ತೆರವುಗೊಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

13/01/2021 12:42 pm

Cinque Terre

6.92 K

Cinque Terre

0

ಸಂಬಂಧಿತ ಸುದ್ದಿ