ಬಂಟ್ವಾಳ: ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಒಕ್ಕೆತ್ತೂರು ಮೂಲೆ ಎಂಬಲ್ಲಿ ಮನೆಯ ಗೂಡಿನಲ್ಲಿದ್ದ 40 ಪಾರಿವಾಳಗಳನ್ನು ಕದ್ದೊಯ್ಯಲಾಗಿದೆ.
ಒಕ್ಕೆತ್ತೂರು ಮೂಲೆ ನಿವಾಸಿ ಇಬ್ರಾಹಿಂ ಅವರ ಪುತ್ರ ಸುಲೈ ಯಾನೆ ಸುಲೈಮಾನ್ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. "ನಾನು ನನ್ನ ಮನೆಯಲ್ಲಿ 40 ಪಾರಿವಾಳಗಳನ್ನು ಗೂಡಿನಲ್ಲಿ ಇಟ್ಟು ಸಾಕುತ್ತಿದ್ದೆ. ಜ.2 ರಂದು ತಡರಾತ್ರಿ ಮನೆಯಂಗಳಕ್ಕೆ ಆಟೋರಿಕ್ಷಾ ಬಂದಿತ್ತು. ಈ ವೇಳೆ ಎಚ್ಚರಗೊಂಡ ನಾನು ನೋಡಿದಾಗ ಆಟೋರಿಕ್ಷಾದಲ್ಲಿ ಬಂದ ಮೂವರು ವ್ಯಕ್ತಿಗಳು ಗೂಡಿನ ಬಾಗಿಲಿನ ಬೀಗ ಮುರಿದು ಅದರೊಳಗಿದ್ದ ಪಾರಿವಾಳಗಳನ್ನು ಕದ್ದೊಯ್ದಿದ್ದಾರೆ.
ಗೂಡಿನೊಳಗೆ 40 ಪಾರಿವಾಳಗಳಿದ್ದು, ಅದರ ಒಟ್ಟು ಮೌಲ್ಯ 20000 ರೂ. ಎಂದು ಅವರು ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
07/01/2021 06:58 pm