ಮಂಗಳೂರು: ಕ್ರಿಸ್ಮಸ್ ಉಡುಗೊರೆ ಕಳುಹಿಸುವುದಾಗಿ ವ್ಯಕ್ತಿಯೋರ್ವರಿಗೆ ಅಪರಿಚಿತನೊಬ್ಬ 1.29 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣದ ಬಗ್ಗೆ ತಡವಾಗಿ ದೂರು ದಾಖಲಾಗಿದೆ.
ಪ್ರಕರಣದ ವಿವರ: ನಗರದ ವ್ಯಕ್ತಿಯೋರ್ವರ ಮೊಬೈಲ್ ಫೋನ್ ಗೆ ಡಿ.15ರಂದು +44748290281 ದೂರವಾಣಿ ಸಂಖ್ಯೆಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ತನ್ನನ್ನು ನೆಲ್ಸನ್ ವಿಲಿಯಮ್ಸ್ ಎಂದು ಪರಿಚಯ ಮಾಡಿದ್ದಾನೆ.
ತಾನು ಕ್ರಿಸ್ಮಸ್ ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದಾನೆ. ಅವರು ಅದನ್ನು ನಿರಾಕರಿಸಿದ್ದಾರೆ.
ಆದರೆ ಡಿ.21ರಂದು 9821814383 ಮೊಬೈಲ್ ಫೋನ್ ನಿಂದ ಕರೆ ಬಂದಿದ್ದು, ಆತ ತನ್ನನ್ನು ಕಸ್ಟಮ್ಸ್ ಅಧಿಕಾರಿಯೆಂದು ನಂಬಿಸಿದ್ದಾನೆ.
ಆ ಬಳಿಕ ನೆಲ್ಸನ್ ವಿಲಿಯಮ್ಸ್ ಎಂಬಾತ ತಮಗೆ ಉಡುಗೊರೆ ಕಳುಹಿಸಿದ್ದು, ಅದನ್ನು ಬಿಡಿಸಿಕೊಳ್ಳಲು ಹಣದ ಬೇಡಿಕೆ ಇಟ್ಟಿದ್ದಾನೆ.
ಈ ಹಿನ್ನೆಲೆಯಲ್ಲಿ ತನ್ನ ಬ್ಯಾಂಕ್ ಖಾತೆ ಸಂಖ್ಯೆ ನೀಡಿ 1,29,300 ರೂ. ವರ್ಗಾಯಿಸಿದ್ದಾನೆಂದು ಮಂಗಳೂರಿನ ಪಾಂಡೇಶ್ವರ ಇಕಾನಾಮಿಕ್ಸ್ ನಾರ್ಕೋಟಿಕ್ ಆ್ಯಂಡ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/01/2021 11:46 am