ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಟೆರೇಸ್ ನಿಂದ ಬಿದ್ದು ಗಾಯಗೊಂಡಿದ್ದ ಉದ್ಯಮಿ ಸಾವು

ಸುಳ್ಯ: ಟೆರೇಸ್ ಮೇಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸುಳ್ಯದ ಉದ್ಯಮಿ ಕಾವೇರಿ ಸಂತೋಷ್ ಮಡ್ತಿಲ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮನೆಯೊಂದರ ಟೆರೇಸ್ ಮೇಲಿನಿಂದ ಆಯ ತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದ ಸುಳ್ಯದ ಉದ್ಯಮಿ ಹಾಗೂ ನಗರ ಗೌಡ ಸಂಘದ ಮುಂದಾಳು, ಕಾವೇರಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರೂ ಆಗಿರುವ ಸಂತೋಷ್ ಮಡ್ತಿಲ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಮೃತರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ.

Edited By : Nagaraj Tulugeri
Kshetra Samachara

Kshetra Samachara

02/01/2021 07:35 am

Cinque Terre

14.95 K

Cinque Terre

2

ಸಂಬಂಧಿತ ಸುದ್ದಿ