ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಸ್ ರಾವ್ ನಗರ ಲಿಂಗಪ್ಪಯ್ಯ ಕಾಡಿನಿಂದ ಯುವಕನೊಬ್ಬ ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವಕನನ್ನು ಮೂಲತ: ಗುಲ್ಬರ್ಗ ಜೇವರ್ಗಿ ನಿವಾಸಿ ಲಿಂಗಪ್ಪಯ್ಯಕಾಡು ಬಾಡಿಗೆ ಮನೆಯಲ್ಲಿ ವಾಸವಿದ್ದ ಹುಸೇನ್ (24) ಎಂದು ಗುರುತಿಸಲಾಗಿದೆ.
ಯುವಕ ಹುಸೇನ್ ಕೂಲಿ ಕೆಲಸ ಮಾಡುತ್ತಿದ್ದು, ಅ. 4ರ ಭಾನುವಾರ ಸಂಜೆ 7ಗಂಟೆಗೆ ರೂ. 1500 ಹಾಗೂ ತನ್ನ ಬೈಕ್ ನಲ್ಲಿ ( ಕೆ ಎ 19 ಇ ಎಂ 4226 ) ಮನೆಯಿಂದ ತೆರಳಿದ್ದು, ಬಳಿಕ ಮನೆಗೆ ಬಾರದೆ ಊರಿಗೂ ತೆರಳದೆ ನಾಪತ್ತೆಯಾಗಿದ್ದಾನೆ ಎಂದು ಮುಲ್ಕಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಯುವಕ 163" ಉದ್ದವಿದ್ದು ನೀಲಿ ಬಣ್ಣದ ಶರ್ಟ್ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದು ಕನ್ನಡ, ತುಳು, ಉರ್ದು ಮಾತನಾಡುತ್ತಾನೆ.
ಯಾರಿಗಾದರೂ ಈತನ ಬಗ್ಗೆ ಮಾಹಿತಿ ತಿಳಿದಲ್ಲಿ ಮೂಲ್ಕಿ ಪೊಲೀಸ್ ಠಾಣೆ (08242290533) ಸಂಪರ್ಕಿಸಲು ಕೋರಲಾಗಿದೆ.
Kshetra Samachara
07/10/2020 09:40 am