ಬಂಟ್ವಾಳ : ತಾಲ್ಲೂಕಿನ ಬದನಾಜೆ ಬಸ್ ನಿಲ್ದಾಣದ ಬಳಿ ಗಾಂಜಾ ಪೆಡ್ಲಿಗ್ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ವಿಟ್ಲ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿನೋದ್ ಎಸ್ ನೇತೃತ್ವದ ಪೊಲೀಸರ ತಂಡವು ಬಂಧಿಸಿದ್ದು 450 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿ ಕಡಬದ ವಿದ್ಯಾಪುರ ನಿವಾಸಿ ಆಸಿಫ್ ಅಲಿಯಾಸ್ ಅಚಿ (30). ಇನ್ನು ಮತ್ತೋರ್ವ ಆರೋಪಿ ಕಂಬಳಬೆಟ್ಟುವಿನ ಹಾರಿಸ್ ಪರಾರಿಯಾಗಿದ್ದಾನೆ.
ಸುಮಾರು 59,000 ರೂ.ಗಳ ಮೌಲ್ಯದ ಗಾಂಜಾ, ಬೈಕ್ ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
Kshetra Samachara
06/10/2020 12:30 pm