ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ಳಾರೆ: ಬಾಲಕಿ ಸ್ನಾನದ ವಿಡಿಯೋ ರೆಕಾರ್ಡ್‌- ಕಾಮುಕನ ವಿರುದ್ಧ ಎಫ್‌ಐಆರ್ ದಾಖಲು

ಬೆಳ್ಳಾರೆ: ಅಪ್ರಾಪ್ತೆ ಸ್ನಾನ ಮಾಡುತ್ತಿರುವ ದೃಶ್ಯವನ್ನು ಯುವಕನೊಬ್ಬ ಮೊಬೈಲ್‌‌ನಲ್ಲಿ ಸೆರೆ ಹಿಡಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದಿದೆ.

ಸುಳ್ಯ ಕಲ್ಮಡ್ಕ ಗ್ರಾಮದ ನಿವಾಸಿ ಶ್ಯಾಮ್ ವಿಡಿಯೋ ಮಾಡಿದ ಆರೋಪಿ. ಸೆಪ್ಟೆಂಬರ್ 26ರ ಶನಿವಾರ ರಾತ್ರಿ ಸುಮಾರು 10:10 ಗಂಟೆಗೆ ಅಪ್ರಾಪ್ತೆ ತನ್ನ ಮನೆಯಲ್ಲಿ ಸ್ನಾನ ಮಾಡುತ್ತಿದ್ದಳು. ಈ ವೇಳೆ ಆರೋಪಿ ಶ್ಯಾಮ್ ಸ್ನಾನದ ಕೊಠಡಿಯ ಹಿಂಭಾಗದಲ್ಲಿ ಬಂದು ಬಾಲಕಿಯು ಸ್ನಾನ ಮಾಡುತ್ತಿರುವ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಇದನ್ನು ನೋಡಿದ ಬಾಲಕಿಯ ತಾಯಿ ಆರೋಪಿಯ ಮೊಬೈಲ್‌ ಅನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಆರೋಪಿಯು ಮೊಬೈಲ್‌ ಜೊತೆಗೆ ಪರಾರಿಯಾಗಿದ್ದಾನೆ.

ಈ ಸಂಬಂಧ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

30/09/2020 07:03 pm

Cinque Terre

11.62 K

Cinque Terre

0

ಸಂಬಂಧಿತ ಸುದ್ದಿ