ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿ.ಸಿ.ರೋಡ್ : ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ

ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ನೇತ್ರಾವತಿ ನದಿ ಸೇತುವೆಯಿಂದ ಹಿರಿಯ ವ್ಯಕ್ತಿಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ವಯಸ್ಸು 65ರಿಂದ 70 ವರ್ಷಗಳಿರಬಹುದು ಎಂದು ಅಂದಾಜಿಸಲಾಗಿದೆ. ಭಾನುವಾರ ರಾತ್ರಿ ಒಬ್ಬಂಟಿಯಾಗಿ ಸೇತುವೆ ಬಳಿ ಬಂದಿರುವ ಈ ವ್ಯಕ್ತಿ ನದಿಗೆ ಹಾರಿದ್ದಾರೆ. ಕೂಡಲೇ ಗೂಡಿನಬಳಿಯ ಈಜುಗಾರರು ಇವರನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಶವವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಬಂಟ್ವಾಳ ನಗರ ಠಾಣೆ ಅಪರಾಧ ವಿಭಾಗ ಎಸ್.ಐ.ಕಲೈಮಾರ್ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

27/09/2020 10:32 pm

Cinque Terre

10.52 K

Cinque Terre

0

ಸಂಬಂಧಿತ ಸುದ್ದಿ