ಬಂಟ್ವಾಳ: ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿದ ದರೋಡೆಕೋರರು ಮಹಿಳೆಯನ್ನು ಕಟ್ಟಿ ಹಾಕಿ, ಹಲ್ಲೆ ನಡೆಸಿ ಚಿನ್ನಾಭರಣ ದರೋಡೆಗೈದ ಘಟನೆ ವಿಟ್ಲದ ಕಾನತ್ತಡ್ಕದಲ್ಲಿ ನಡೆದಿದೆ.
ಕಾನತ್ತಡ್ಕ ಜುಮಾ ಮಸೀದಿ ಮುಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ಆಟೋ ಚಾಲಕ ರಫೀಕ್ ವಾಸ ಮಾಡುತ್ತಿದ್ದಾರೆ.
ರಫೀಕ್ ಅವರು ಶುಕ್ರವಾರ ಮಸೀದಿಗೆ ತೆರಳಿದ್ದರು. ಅವರ ಜತೆ ಅವರ 10 ವರ್ಷದ ಮಗ ಕೂಡ ತೆರಳಿದ್ದ. ಪತ್ನಿ ಜೈನಾಬ ಅವರು ಒಬ್ಬರೇ ಇದ್ದರು.
ಈ ಬಗ್ಗೆ ಮಾಹಿತಿ ಪಡೆದ ಖದೀಮರು ಮಹಿಳೆಯನ್ನು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿದ್ದಾರೆ. ಸುತ್ತಲೂ ಮನೆಗಳಿದ್ದು, ಯಾರ ಗಮನಕ್ಕೆ ಬಂದಿಲ್ಲ.
ಪತಿ ಮಸೀದಿಯಿಂದ ವಾಪಸ್ಸಾದ ಬಳಿಕವೇ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.
Kshetra Samachara
25/12/2020 04:41 pm