ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಮಾರಡ್ಕ ಶ್ರೀ ಮಾರಿಯಮ್ಮದೇವಳಕ್ಕೆ ಕಳ್ಳರ ಲಗ್ಗೆ; ಹುಂಡಿ, ಮೂಗುತಿ ದೋಚಿ, ಗಲೀಜೂ ಮಾಡಿದರು!

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಮಾರಡ್ಕ ಶ್ರೀ ಮಾರಿಯಮ್ಮ ದೇವಳದಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ.

ಈ ಮಾರಿಗುಡಿಗೆ ನುಗ್ಗಿದ ಕಳ್ಳರು, 3 ಕಾಣಿಕೆ ಡಬ್ಬಿಗಳನ್ನು ಒಡೆದಿದ್ದಾರೆ. ಬಳಿಕ ಗರ್ಭ ಗುಡಿಯ ಬೀಗ ಮುರಿದು ದೇವರ ಮೂಗುತಿ ಕಳವು ಮಾಡಿದ್ದಾರೆ.

ದೇವರ ಚಿನ್ನಾಭರಣಗಳನ್ನು ಬೇರೆಡೆ ಇರಿಸಿದ ಕಾರಣ ಭಾರಿ ಕಳ್ಳತನ ತಪ್ಪಿಹೋಗಿದೆ. ಕೆಲ ವರ್ಷಗಳ ಹಿಂದೆ ಕೂಡ ಇದೇ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳ್ಳತನ ನಡೆಸಿದ ಬಳಿಕ ಕಳ್ಳರು ಸುಮ್ಮನಿರದೆ ದೇವಸ್ಥಾನದಲ್ಲಿ ವಿಕೃತಿ ಮೆರೆದು ದೇವಸ್ಥಾನದಲ್ಲಿ ಗಲೀಜು ಮಾಡಿ ಹೋಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಕಳ್ಳತನ ಪ್ರಕರಣ ನಡೆದಿದ್ದು, ನಾಗರಿಕರು ಆತಂಕಗೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

19/12/2020 12:12 pm

Cinque Terre

9.71 K

Cinque Terre

0

ಸಂಬಂಧಿತ ಸುದ್ದಿ