ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಕೊರೊನಾ ನಿಯಮ ಉಲ್ಲಂಘನೆ; ಶಿಬರೂರಿನಲ್ಲಿ ಸಂತೆ ವ್ಯಾಪಾರಿಗಳ ಮೇಲೆ ಲಾಠಿಚಾರ್ಜ್

ಮುಲ್ಕಿ: ಸುರತ್ಕಲ್ ಸಮೀಪದ ಶಿಬರೂರು ಕೊಡಮಣಿಂತ್ತಾಯ ದೈವಸ್ಥಾನದ ವರ್ಷಾವಧಿ ಉತ್ಸವದಲ್ಲಿ ಸರಕಾರದ ಕೊರೊನಾ ನಿಯಮ ಉಲ್ಲಂಘಿಸಿ ಸಂತೆ ವ್ಯಾಪಾರ ನಡೆಸಿದವರ ಮೇಲೆ ಸುರತ್ಕಲ್ ಪೊಲೀಸರು ಏಕಾಏಕಿ ಲಾಠಿಚಾರ್ಜ್ ನಡೆಸಿ ಸಂತೆ ಮುಚ್ಚಿಸಿದ್ದಾರೆ.

ಬುಧವಾರ ಶಿಬರೂರು ಕೊಡಮಣಿಂತ್ತಾಯ ವರ್ಷಾವಧಿ ಉತ್ಸವ ಆರಂಭವಾಗಿದ್ದು, ರಾತ್ರಿ ಸುಮಾರು 8.30 ರ ವೇಳೆಗೆ ದೈವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಸಂತೆ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಂತೆ ವ್ಯಾಪಾರಿಗಳು ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಕೆಲವರಿಗೆ ಲಾಟಿ ಏಟು ಬಿದ್ದು ಗಾಯಗಳಾಗಿವೆ. ದೈವಸ್ಥಾನದ ಎರಡು ಬದಿಯಲ್ಲಿಯೂ ಕೊರೊನಾ ನಿಯಮ ಉಲ್ಲಂಘಿಸಿ ಅನಧಿಕೃತ ಸಂತೆ ವ್ಯಾಪಾರ ನಡೆಸುತ್ತಿರುವವರನ್ನು ಕೂಡಲೇ ಪೊಲೀಸರು ತೆರವುಗೊಳಿಸಿದ್ದಾರೆ. ಬೆಳಗಿನಿಂದಲೂ ಶಿಬರೂರು ದೈವಸ್ಥಾನಕ್ಕೆ ಬರುವ ರಿಕ್ಷಾ ಪ್ರಯಾಣಿಕರ ಮೇಲೂ ಪೊಲೀಸರು ನಿಗಾ ಇರಿಸಿದ್ದು, ಕಿನ್ನಿಗೋಳಿ ಬಳಿ ಅನೇಕ ರಿಕ್ಷಾಚಾಲಕರಿಗೆ ದಂಡ ವಿಧಿಸಲಾಗಿದೆ.

ಪೊಲೀಸರ ನಡೆಗೆ ಆಕ್ರೋಶ: ಶಿಬರೂರು ದೈವಸ್ಥಾನದಲ್ಲಿ ಕೋವಿಡ್ 19 ನಿಯಮ ಉಲ್ಲಂಘಿಸಿ ಭಕ್ತಾದಿಗಳು ಸೇರಿದ್ದು, ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಹಲವುಭಕ್ತರು ಸರಿಯಾಗಿ ಮಾಸ್ಕ್ ಧರಿಸದೆ ದೈವಸ್ಥಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಾಣುತ್ತಿತ್ತು. ಕೇವಲ ಸಂತೆ ವ್ಯಾಪಾರಸ್ಥರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಪೊಲೀಸರ ನಡೆಗೆ ಸಂತೆ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

16/12/2020 11:02 pm

Cinque Terre

13.18 K

Cinque Terre

0

ಸಂಬಂಧಿತ ಸುದ್ದಿ