ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿಕಾರಿಬೆಟ್ಟು ಗ್ರಾಮದ ಕೊಲಕಾಡಿ ಹಾಗೂ ಪಂಜಿನಡ್ಕದಲ್ಲಿ ಎರಡು ದಿನ ಭರ್ಜರಿಯಾಗಿಯೇ ಕೋಳಿ ಅಂಕ ನಡೆದಿದೆ.
ಲಕ್ಷಾಂತರ ರೂ. ಬೆಟ್ಟಿಂಗ್ ನಡೆದು ಸಾವಿರಾರು ಮಂದಿ ಕೋಳಿ ಅಂಕ ಪ್ರಿಯರು ಭಾಗವಹಿಸಿದ್ದರು. ಈ ಸಂದರ್ಭ ಪಿಕ್ ಪಾಕೆಟ್ ಕೂಡ ಭರ್ಜರಿಯಾಗಿಯೇ ನಡೆದು ಅನೇಕರು ಹಣ ಕಳೆದುಕೊಂಡದ್ದೂ ಸುಳ್ಳಲ್ಲ. ಕೊರೊನಾ ದಿನಗಳಲ್ಲಿ ಭರ್ಜರಿ ಕೋಳಿ ಅಂಕ ನಡೆಸಿದ ಬಗ್ಗೆ ಅತಿಕಾರಿಬೆಟ್ಟು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೋಳಿ ಅಂಕ ಬೆಟ್ಟಿಂಗ್ ದಂಧೆಯಲ್ಲಿ ಭಾಗವಹಿಸಿ ಪಿಕ್ ಪಾಕೆಟ್‌ನಲ್ಲಿ ಹಣ ಕಳೆದುಕೊಂಡ ಬಡ, ಅಮಾಯಕ ಯುವಕರ ನಡೆಗೂ ಅಸಮಾಧಾನ ಹೊರಹಾಕಿದ್ದಾರೆ.
ಕೋಳಿ ಅಂಕದ ಜತೆಗೆ ಪೊಲೀಸರು ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮಟ್ಕಾ, ಇಸ್ಪೀಟ್ ಗೂ ಕಡಿವಾಣ ಹಾಕಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮುಲ್ಕಿ ಹೋಬಳಿಯಲ್ಲಿ ಪಂಚಾಯಿತಿ ಚುನಾವಣೆಗೆ ನೀತಿ ಸಂಹಿತೆ ಇದ್ದರೂ ಕೋಳಿ ಅಂಕಕ್ಕೆ ಪರವಾನಗಿ ನೀಡಿದ ಪೊಲೀಸರ ಕ್ರಮಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
16/12/2020 09:15 pm