ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಳೆ ವೈಷಮ್ಯ ಹಿನ್ನೆಲೆ; ಅಡ್ಡೂರಿನಲ್ಲಿ ಯುವಕನ ಮೇಲೆ ತಲವಾರು ದಾಳಿ

ಮಂಗಳೂರು: ನಗರದ ಹೊರವಲಯದ ಅಡ್ಡೂರಿನಲ್ಲಿ ಯುವಕನೋರ್ವನ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿದ ಘಟನೆ ಮಂಗಳವಾರ ತಡರಾತ್ರಿ‌ ನಡೆದಿದೆ.

ಅಡ್ಡೂರು ನಿವಾಸಿ ಮುಹಮ್ಮದ್ ತಾಜುದ್ದೀನ್ (30) ದಾಳಿಗೊಳಗಾದವರು.

ತಾಜುದ್ದೀನ್ ಮಂಗಳವಾರ ತಡರಾತ್ರಿ ಅಡ್ಡೂರಿನಿಂದ ಮನೆ ಕಡೆಗೆ ತೆರಳುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಿಂದ ಅವರ ತೊಡೆ, ಕೈ ಸಹಿತ ಹಲವೆಡೆ ಗಾಯಗಳಾಗಿವೆ.

ಹಳೆ ವೈಷಮ್ಯದಿಂದ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಗಾಯಗೊಂಡ ತಾಜುದ್ದೀನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Edited By : Nagaraj Tulugeri
Kshetra Samachara

Kshetra Samachara

16/12/2020 11:53 am

Cinque Terre

12.82 K

Cinque Terre

0

ಸಂಬಂಧಿತ ಸುದ್ದಿ