ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಮುಸುಕುಧಾರಿ ವ್ಯಕ್ತಿಯೊಬ್ಬ ಅಂಗಡಿಗಳಿಗೆ ಹೋಗಿ ಗ್ರಾಹಕನಂತೆ ನಟಿಸಿ ಹಣ ಎಗರಿಸಿ ಪರಾರಿಯಾಗಿದ್ದಾನೆ.
ಈ ವಂಚಕ ಅಂಗಡಿಗೆ ತೆರಳಿ 150 ರೂ.ನ ಯಾವುದಾದರೊಂದು ವಸ್ತು ಖರೀದಿಸಿ, 2000 ರೂ. ನೋಟು ಅಂಗಡಿಯವರಿಗೆ ನೀಡಿ, ಉಳಿದ ಚಿಲ್ಲರೆ 1850 ರೂ. ವಾಪಸ್ ಪಡಕೊಂಡು ಅಂಗಡಿ ಹೊರಕ್ಕೆ ಬಂದು, ಪುನಃ ತಿರುಗಿ ಅಂಗಡಿ ಒಳಗೆ ಬಂದು ನಾನು ಕೊಟ್ಟ 2000 ರೂ. ನೋಟ್ ಸರಿ ಇದೆಯೇ ನೋಡಿ, ಅದು ಸ್ವಲ್ಪ ಹರಿದಿದೆ. ವಾಪಸ್ ಕೊಡಿ, ನಿಮಗೆ ಬೇರೆ ಕೊಡುತ್ತೇನೆ ಎಂದು ಹೇಳಿ ಅಂಗಡಿಯವರಿಂದ ಆ ನೋಟ್ ವಾಪಸ್ ಪಡಕೊಂಡು, ಚಿಲ್ಲರೆ 1850 ರೂ. ಸಹಿತ ಅಲ್ಲಿಂದ ಪರಾರಿಯಾಗುತ್ತಾನೆ.
ಆಣತಿ ದೂರದಲ್ಲಿ ಅವನಿಗಾಗಿ ಒಂದು ಆಟೋರಿಕ್ಷಾ ಕಾಯುತ್ತಾ ಇರುತ್ತೆ, ಅದರಲ್ಲಿ ಎಸ್ಕೇಪ್ ಆಗುತ್ತಾನೆ. ಈ ಖದೀಮರಿಬ್ಬರ ಕೈಚಳಕ ದಾಮಸ್ಕಟ್ಟೆ ಹಾಗೂ ಕಿನ್ನಿಗೋಳಿ ಪ್ರದೇಶದಲ್ಲಿ ಅದೂ ಮಹಿಳೆಯರು ಇರುವ ಅಂಗಡಿಗಳಲ್ಲಿ ವಂಚನೆ ಘಟನೆ ನಡೆದಿರುವುದು ಸ್ಥಳದಲ್ಲಿ ಭಯದ ವಾತಾವರಣ ಮೂಡಿಸಿದೆ. ಕಳ್ಳರ ಈ ಮೋಸದಾಟ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ಬಗ್ಗೆ ಅಂಗಡಿ ಮಾಲೀಕ ಮುಲ್ಕಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Kshetra Samachara
12/12/2020 03:03 pm