ಮಂಗಳೂರು: ಕಳವುಗೈದ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ಪಾಂಡೇಶ್ವರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸ್ಥಳೀಯರಾದ ಮೊಹಮ್ಮದ್ ಸಫ್ವಾನ್, ಸೈಫುಲ್ಲಾ ಫರಾಜ್ ಬಂಧಿತರು. ಪಾಂಡೇಶ್ವರ ಠಾಣಾ ಉಪ ನಿರೀಕ್ಷಕ ಅನಂತ ಮುರ್ಡೇಶ್ವರ್ ಸಿಬ್ಬಂದಿಯೊಂದಿಗೆ ರೌಂಡ್ಸ್ ಮಾಡುತ್ತಿದ್ದಾಗ ಮುಂಜಾವ 3 ಗಂಟೆ ಸುಮಾರಿಗೆ ಮಂಗಳೂರು ದಕ್ಷಿಣ ದಕ್ಕೆಯಲ್ಲಿ ಬೈಕ್ ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳ ಸಹಿತ ಬೈಕ್‌ನ್ನು ವಶ ಪಡಿಸಿರುವ ಪೊಲೀಸರು, ಪ್ರಕರಣ ದಾಖಲಿಸಿದ್ದು, ಬೈಕ್‌ನ್ನು ಸುರತ್ಕಲ್ ಬಳಿ ಕಳವು ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
Kshetra Samachara
12/12/2020 08:51 am