ಪುತ್ತೂರು: ಅವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಮೂಲತ: ನಗರದ ಪರ್ಲಡ್ಕ ಎಂಬಲ್ಲಿನ ನಿವಾಸಿ ಶಾರದಾ (55) ನಾಪತ್ತೆಯಾದವರು.
ಶಾರದಾ ಅವರು ಅವಿವಾಹಿತೆಯಾಗಿದ್ದು, ಕಳೆದ ಕೆಲ ಸಮಯಗಳಿಂದ ಸಾಲ್ಮರದಲ್ಲಿರುವ ಸಹೋದರಿ ಪುಷ್ಪಲತಾ ಎಂಬವರೊಂದಿಗೆ ವಾಸವಾಗಿದ್ದರು.
ಸೋಮವಾರ ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದ ಅವರು, ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
09/12/2020 08:03 am