ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಳಿನೆಲೆ: ಹಾಲು ತರಲು ಪೇಟೆಗೆ ಹೋಗಿದ್ದ ತರುಣಿ ನಾಪತ್ತೆ

ಕಡಬ: ಹಾಲು ತರಲು ಪೇಟೆಗೆ ಹೋಗಿದ್ದ ತರುಣಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನ.27 ರಂದು ನಡೆದಿದೆ.

ಬಿಳಿನೆಲೆ ಗ್ರಾಮದ ಪರ್ಲ ನಿವಾಸಿ ಬೋಜಪ್ಪ ಗೌಡ ಅವರ ಪುತ್ರಿ ಶುಭಲತಾ (16 ) ನಾಪತ್ತೆಯಾದವರು.

ಅವರು ಎಂದಿನಂತೆ ಬಿಳಿನೆಲೆ ಪೇಟೆಗೆ ಹಾಲು ತರಲು ಹೋಗಿದ್ದು, ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ತರುಣಿಯ ತಂದೆ ಕಡಬ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

28/11/2020 02:03 pm

Cinque Terre

11.8 K

Cinque Terre

0

ಸಂಬಂಧಿತ ಸುದ್ದಿ