ಮೂಡುಬಿದಿರೆ: ಅಮಾನುಷ ರೀತಿಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓಮ್ನಿ ಕಾರನ್ನು ಮೂಡುಬಿದಿರೆ ಪೊಲೀಸರು ಗುರುವಾರ ಬೆಳಗ್ಗೆ ತಡೆದಿದ್ದು, ಐದು ದನಗಳನ್ನು ರಕ್ಷಿಸಿದ್ದು, ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಕಾರ್ಕಳ ಕಡೆಯಿಂದ ಮೂಡುಬಿದಿರೆ ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ಹಿಂಸಾತ್ಮಕವಾಗಿ ದನಗಳನ್ನು ತುಂಬಿಸಿ ಅತೀ ವೇಗವಾಗಿ ಹೋಗುತ್ತಿದ್ದ ಓಮ್ನಿ ಕಾರನ್ನು ಪೊಲೀಸರು ಅನುಮಾನಗೊಂಡು ಪೇಟೆಯ ಬಜಾಜ್ ಶೋರೂಂ ಬಳಿಯ ಅಡ್ಡರಸ್ತೆಯಲ್ಲಿ ತಡೆದಿದ್ದಾರೆ.
ಕಾರು ನಿಲ್ಲಿಸಿ ಚಾಲಕ ಸಹಿತ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ ಐದು ದನಗಳನ್ನು ಅಮಾನುಷವಾಗಿ ತುಂಬಿಸಿರುವುದು ಕಂಡುಬಂದಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
26/11/2020 04:30 pm