ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಶ್ಲೀಲ ಫೋಟೊ ವೈರಲ್ ಬೆದರಿಕೆ; ಆರೋಪಿಗಳು ಅಂದರ್

ಮಂಗಳೂರು: ಫೇಸ್ಬುಕ್ ನಲ್ಲಿ ಮಹಿಳೆಯರ ಹೆಸರಿನಲ್ಲಿ ಖಾತೆ ತೆರೆದು ನಗರದ ಕೆಪಿಟಿಯ ವ್ಯಕ್ತಿಯನ್ನು ವಂಚಿಸಿದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಸಾಕ್ಷಿ ರಾಜ್ ಹೆಸರಿನಲ್ಲಿ ಖಾತೆ ತೆರೆದ ಆರೋಪಿಗಳು ಕೆಪಿಟಿ ಯ ರಾಜೇಶ್ ಎಂಬವರಿಗೆ ಮೆಸೇಜ್ ಮಾಡಿ ಮಹಿಳೆಯ ಅಶ್ಲೀಲ ಫೋಟೊಗಳನ್ನು ರವಾನಿಸಿದ್ದರು.

ಅಲ್ಲದೆ, ರಾಜೇಶ್ ಅವರಲ್ಲೂ ತಮ್ಮ ಅಶ್ಲೀಲ ಫೋಟೊ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಮಹಿಳೆಯೇ ಇರಬೇಕೆಂದು ನಂಬಿ ರಾಜೇಶ್ ತನ್ನ ಅಶ್ಲೀಲ ಫೋಟೊಗಳನ್ನೂ ಫೇಸ್ಬುಕ್ ಮೆಸೆಂಜರ್ ಮೂಲಕ ರವಾನಿಸಿದ್ದಾರೆ.

ತದನಂತರ ತನ್ನ ಅಸಲಿ ರೂಪ ತೋರ್ಪಡಿಸಿದ ಆರೋಪಿಗಳು ಫೋಟೊಗಳನ್ನು ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ರಾಜೇಶ್ ಅವರಿಂದ ಹಣ ಪೀಕಿಸಿದ್ದಾರೆ.

ಹಣ ನೀಡಿದ ಬಳಿಕವೂ ಸುಮ್ಮನಿರದ ಆರೋಪಿಗಳು ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ರಾಜೇಶ್ ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದಾರೆ.

ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ ಪೊಲೀಸರು, ಇದೀಗ ಬೆಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಗೋಕುಲ್ ರಾಜ್ (20), ಪವನ್ (20) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

25/11/2020 02:55 pm

Cinque Terre

10.63 K

Cinque Terre

0

ಸಂಬಂಧಿತ ಸುದ್ದಿ