ಧರ್ಮಸ್ಥಳ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ಮನೆ ದರೋಡೆಗೆ ವಿಫಲಯತ್ನ ನಡೆಸಿದ್ದ ತಂಡವನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕು ಮೇಲ್ಕಾರ್ ಬಳಿ ನಿವಾಸಿ ಇರ್ಫಾನ್ ( 28) ಮತ್ತು ತೌಸೀಫ್ ಯಾನೆ ತಚ್ಚು (26), ಬೆಳಾಲು ನಿವಾಸಿ ಚಿದಾನಂದ ಗೌಡ (25) ಹಾಗೂ ಕಲ್ಮಂಜ ನಿವಾಸಿ ಮೋಹನ (32) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಸಂಶಯದ ಮೇರೆಗೆ ವಶಕ್ಕೆ ಪಡೆದು ಕೂಲಂಕಶ ವಿಚಾರಣೆಗೆ ಒಳಪಡಿಸಿದಾಗ, ಕಲ್ಮಂಜ ಗ್ರಾಮದ, ನಿಡಿಗಲ್ ಎಂಬಲ್ಲಿ ಮನೆ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೌಸೀಫ್ ಆಲಿಯಾಸ್ ತಚ್ಚು ಈ ಮೊದಲೂ ಅನೇಕ ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ಮನೆ ದರೋಡೆಗೆ ವಿಫಲಯತ್ನ ನಡೆಸಿದ ಪ್ರಕರಣದಲ್ಲಿರುವ ಇನ್ನೂ ಕೆಲವು ಆರೋಪಿಗಳ ಬಂಧನ ಬಾಕಿ ಇದ್ದು, ಪೊಲೀಸರು ಅವರ ಹುಡುಕಾಡದಲ್ಲಿ ತೊಡಗಿದ್ದಾರೆ.
Kshetra Samachara
24/11/2020 04:44 pm