ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ವಿಪರೀತ ರಕ್ತಸ್ರಾವದಿಂದ ಬಾಣಂತಿ ಮೃತ್ಯು

ಕಡಬ: ಹೆರಿಗೆ ಬಳಿಕ ವಿಪರೀತ ರಕ್ತಸ್ರಾವವಾಗಿ ಮಹಿಳೆ ಮೃತಪಟ್ಟ ಘಟನೆ ಕೊಂಬಾರು ಗ್ರಾಮದ ಮಣಿಬಾಂಡ ಎಂಬಲ್ಲಿ ನ.15ರಂದು ನಡೆದಿದೆ.

ಕೊಂಬಾರು ಗ್ರಾಮದ ಮಣಿಬಾಂಡ ಪೆರುಂದೋಡಿ ನಿವಾಸಿ ಬಾಲಕೃಷ್ಣ ಎಂಬವರ ಪತ್ನಿ ಸುನೀತಾ (35) ಮೃತಪಟ್ಟ ಮಹಿಳೆ.

ಸುನೀತಾ ನ.15 ರಂದು ಮಧ್ಯಾಹ್ನ ಅವರ ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ವಿಪರೀತ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆತರಲಾಗಿತ್ತು.

ಆಸ್ಪತ್ರೆ ತಲುಪಿದ ಕೆಲ ಹೊತ್ತಿನಲ್ಲಿ ಸುನೀತಾ ಅವರು ಮೃತಪಟ್ಟಿದ್ದರು. ವಿಶೇಷ ಎಂದರೆ ಸುನೀತಾ ಅವರಿಗೆ ಇದು 9ನೇ ಹೆರಿಗೆಯಾಗಿದ್ದು, ಅದರಲ್ಲಿ ಎರಡು ಮಕ್ಕಳು ಅವಧಿಪೂರ್ವ ಹೆರಿಗೆಯಿಂದ ಮೃತಪಟ್ಟಿವೆ. ಪ್ರಸ್ತುತ ಅವರಿಗೆ 5 ಗಂಡು ಹಾಗೂ 2 ಹೆಣ್ಣು ಮಕ್ಕಳಿದ್ದಾರೆ. ಸುನೀತಾ ಕಡಬ ನಿವಾಸಿಯಾಗಿದ್ದು, ಅವರನ್ನು ಕೊಂಬಾರು ಮಣಿಬಾಂಡಕ್ಕೆ ಮದುವೆ ಮಾಡಿ ಕೊಡಲಾಗಿತ್ತು.

Edited By : Vijay Kumar
Kshetra Samachara

Kshetra Samachara

15/11/2020 09:13 pm

Cinque Terre

10.1 K

Cinque Terre

0

ಸಂಬಂಧಿತ ಸುದ್ದಿ