ಮಂಗಳೂರು: ಆಶ್ರಮದಲ್ಲಿದ್ದ ವಿಧವೆ, ಪ್ರಿಯಕರನ ಮನೆಯಲ್ಲಿ ಪತ್ತೆಯಾದ ಘಟನೆ ನಗರ ಹೊರವಲಯದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಒಂದೂವರೆ ವರ್ಷದ ಹಿಂದೆ ಹಿಂದೂ ಸಂಘಟನೆಗಳಿಂದ ಪಜೀರು ಗೋವನಿತಾಶ್ರಮಕ್ಕೆ ಸೇರಿದ್ದ ವಿಧವೆ ಇತ್ತೀಚೆಗೆ ನಾಪತ್ತೆಯಾಗಿದ್ದರು. ಈಗ ತನ್ನ ಹಳೆಯ ಪ್ರಿಯಕರನ ಜತೆಗೆ ಉಳ್ಳಾಲದಲ್ಲಿ ಪತ್ತೆಯಾಗಿದ್ದಾರೆ.
ಅಡ್ಯಾರುಪದವಿನಲ್ಲಿದ್ದ ವಿಧವೆಗೆ ಎರಡು ವರ್ಷಗಳ ಹಿಂದೆ ಉಳ್ಳಾಲದ ವಿವಾಹಿತ ಶೌಕತ್ ಎಂಬಾತನ ಜತೆಗೆ ಪ್ರೇಮವಿತ್ತು. ಒಂದೂವರೆ ವರ್ಷದ ಹಿಂದೆ ಜತೆಯಾಗಿ ವಾಮಂಜೂರಿನಲ್ಲಿದ್ದ ಶೌಕತ್ ಮತ್ತು ಮಹಿಳೆಯನ್ನು ಒಂದೂವರೆ ವರ್ಷದ ಹಿಂದೆ ಹಿಂದೂ ಸಂಘಟನೆಯವರು ಬೇರ್ಪಡಿಸಿ, ಪಜೀರು ಗೋವನಿತಾಶ್ರಮಕ್ಕೆ ಒಪ್ಪಿಸಿದ್ದರು. ಕಳೆದ ನವೆಂಬರ್ 2 ರಂದು ಈಕೆ ಆಶ್ರಮದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಗೋವನಿತಾಶ್ರಮ ಸಮಿತಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಇಬ್ಬರನ್ನೂ ಕರೆದು ವಿಚಾರಣೆ ನಡೆಸಿರುವ ಪೊಲೀಸರು, ಇಬ್ಬರೂ ವಯಸ್ಕರಾಗಿದ್ದರಿಂದ ದೂರು ದಾಖಲಿಸಿಕೊಂಡಿಲ್ಲ.
Kshetra Samachara
13/11/2020 06:52 pm