ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ಸಾಮಾಜಿಕ ಜಾಲತಾಣದಲ್ಲಿ ಯುವತಿ ಫೋಟೊ ವೈರಲ್; ವಂಚಕನ ವಿರುದ್ಧ ದೂರು

ಉಪ್ಪಿನಂಗಡಿ: ಫೇಸ್‍ಬುಕ್ ನಲ್ಲಿ ಯುವತಿಯ ಸ್ನೇಹ ಗಳಿಸಿ ಆಕೆಯೊಂದಿಗೆ ತೀರ್ಥಯಾತ್ರೆ ನಡೆಸಿ ಅಲ್ಲಿ ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಖತರ್ ನಾಕ್ ಯುವಕನೋರ್ವನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕು ಬಂಟ್ರ ಗ್ರಾಮದ ಮರ್ಧಾಳ ಪಾಲತ್ತಡ್ಕ ಮನೆ ನಿವಾಸಿ ಶೇಖ್ ಇಸ್ಮಾಯಿಲ್ ಎಂಬವರ ಪುತ್ರ ಅಬ್ದುಲ್ ರಜಾಕ್ ತನ್ನ ಹೆಸರನ್ನು ಖುಷಿಕ್ ಯಾನೆ ಸಂಜು ಎಂದು ಯುವತಿಗೆ ಪರಿಚಯಿಸಿಕೊಂಡಿದ್ದ. ನನಗೆ ಹೆತ್ತವರಿಲ್ಲ, ಉತ್ತಮ ಸ್ನೇಹಿತರನ್ನು ಬಯಸುತ್ತಿದ್ದೇನೆ ಎಂದು ಫೇಸ್‍ಬುಕ್ ನಲ್ಲಿ ಕೌಕ್ರಾಡಿ ಗ್ರಾಮದ 24ರ ಹರೆಯದ ಯುವತಿಯನ್ನು ಸಂಪರ್ಕಿಸಿದ್ದ. ಈತನ ಮಾತು ನಂಬಿದ ಯುವತಿ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಬಳಿಕ ವಾಟ್ಸಪ್ ನಂಬರ್ ನೀಡಿ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ನ.1ರಂದು ಯುವತಿಯು ಮನೆಯವರ ಒಪ್ಪಿಗೆ ಪಡೆದು ಆತನೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದಳು. ಈ ವೇಳೆ ಹಣೆ ತುಂಬಾ ದೇವರ ಪ್ರಸಾದದ ನಾಮ ಬಳಿದು ಯುವತಿಯೊಂದಿಗೆ ಫೋಟೊ ತೆಗೆಸಿಕೊಂಡಿದ್ದ ರಜಾಕ್ ಬಳಿಕ ಆ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ದುರುದ್ದೇಶಪೂರಿತವಾಗಿ ಈ ಕೃತ್ಯವೆಸಗಿರುವುದು, ಸುಳ್ಳು ಹೇಳಿ ವಂಚಿಸಿದ ಕಾರಣಕ್ಕೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯು ಕನಕರಾಜು ಎಂಬ ಹೆಸರಿನಲ್ಲೂ ಫೇಸ್ ಬುಕ್ ನಲ್ಲಿ ನಕಲಿ ಖಾತೆ ಹೊಂದಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Edited By : Vijay Kumar
Kshetra Samachara

Kshetra Samachara

13/11/2020 04:50 pm

Cinque Terre

10.84 K

Cinque Terre

3

ಸಂಬಂಧಿತ ಸುದ್ದಿ