ಮುಲ್ಕಿ: ಇಲ್ಲಿನ ಪಕ್ಷಿಕೆರೆಯಲ್ಲಿ ರಾತ್ರಿ ವೇಳೆ ಯಾರೋ ದುಷ್ಕರ್ಮಿಗಳು ಮನೆಯೊಂದರ ಬಾಗಿಲು ಬಡಿ ದಿರುವುದಾಗಿ ಮುಲ್ಕಿ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ.
ಪಕ್ಷಿಕೆರೆ ಬ್ಯಾಂಕ್ ಆಫ್ ಬರೋಡ ಮುಂಭಾಗದಲ್ಲಿರುವ ರಾಕಿ ಎಂಬವರ ಮನೆ ಬಾಗಿಲನ್ನು ದುಷ್ಕರ್ಮಿಗಳು ರಾತ್ರಿ 1 ಗಂಟೆ ಸುಮಾರಿಗೆ ಬಡಿದಿದ್ದಾರೆ.
ಈ ವೇಳೆ ಎಚ್ಚೆತ್ತುಕೊಂಡ ಮನೆಮಂದಿ ಕಿಟಕಿ ಮೂಲಕ ಅವರ ಚಲನವಲನ ಗಮನಿಸಿದ್ದಾರೆ ಎನ್ನಲಾಗಿದೆ.
ಬುಲೆಟ್ ಬೈಕ್ ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಬ್ಯಾಂಕ್ ಆಫ್ ಬರೋಡದ ಮುಂಭಾಗದ ಬಸ್ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿದ್ದರು. ಬಳಿಕ ಹಳೆಯಂಗಡಿ ಕಡೆ ತೆರಳಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ದೂರು ದಾಖಲಿಸಿರುವ ಮುಲ್ಕಿ ಪೊಲೀಸರು ಸ್ಥಳ ಪರಿಶೀಲಿಸುತ್ತಿದ್ದು, ಸಮೀಪದ ಸಿಸಿ ಟಿವಿಗಳಲ್ಲಿ ದಾಖಲಾಗಿರುವ ದುಷ್ಕರ್ಮಿಗಳ ಚಲನವಲನ ಗಮನಿಸಿ, ಬಂಧನಕ್ಕೆ ಬಲೆ ಬೀಸಿದ್ದಾರೆ.
Kshetra Samachara
13/11/2020 01:25 pm