ಮಂಗಳೂರು: ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಡಿಕಲ್ ನಿವಾಸಿ ಸಂತೋಷ್ ಸಪಲ್ಯ (43) ಮತ್ತು ಹಾವೇರಿ ನಿವಾಸಿ ಸಿದ್ದು (28) ಬಂಧಿತರು. ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷದಿಂದ ಕಾವೂರು ಮಲ್ಲಿ ಲೇಔಟ್‌ನಲ್ಲಿ ಪತ್ನಿ ಜತೆ ವಾಸಿಸುತ್ತಿದ್ದರು. ಅ.3ರಂದು ಸುರೇಂದ್ರನ್ ಅವರ ಕೊಲೆಗೈಯಲಾಗಿತ್ತು.
ಕೊಲೆಗೆ ಕಾರಣ: ಸುರೇಂದ್ರನ್ ಅವರು ಸುಮಾರು 2 ವರ್ಷಗಳ ಹಿಂದೆ ಸಂತೋಷ್ ಅವರ ಬಳಿ ಟ್ರೆಸ್ ಕೆಲಸ ಮಾಡಿಸಿದ್ದರು. ಇದರಲ್ಲಿ 25 ಸಾವಿರ ರೂ. ಕೊಡಲು ಬಾಕಿಯಿದ್ದು, ಅದನ್ನು ಸಂತೋಷ್ ಕೇಳುತ್ತಲೇ ಇದ್ದ. ಆದರೆ ಕೊಡಲು ನಿರಾಕರಿಸಿದ ಕಾರಣಕ್ಕೆ ಸಿದ್ದು ಜತೆ ಸೇರಿ ಕೊಲೆ ಕೃತ್ಯ ನಡೆಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಅಪರಾಧ ಪತ್ತೆದಳ ಮತ್ತು ಕಾವೂರು ಪೊಲೀಸರ ತಂಡ ಕಾರ್ಯಾಚರಣೆ ಆರಂಭಿಸಿದರು. ಸಂಶಯದ ಮೇರೆಗೆ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಬಳಿಕ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Kshetra Samachara
09/11/2020 09:03 pm