ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಐಕಳ ನೆಲ್ಲಿಗುಡ್ಡೆ ಎಂಬಲ್ಲಿ ಗುತ್ತಿಗೆದಾರರೊಬ್ಬರು ಡೆತ್ ನೋಟ್ ಬರೆದಿಟ್ಟು ಮನೆಯೊಳಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐಕಳ ನೆಲ್ಲಿಗುಡ್ಡೆ ನಿವಾಸಿ ಮಂಜೇಶ್ ಪಿ.ಶೆಟ್ಟಿ (52) ಮೃತಪಟ್ಟವರು.
ಅವರು ಕಿನ್ನಿಗೋಳಿ, ಮೂರುಕಾವೇರಿ, ಕಟೀಲು, ಮಂಗಳೂರು ಪರಿಸರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.
ಮನೆಯಲ್ಲಿ ತಾಯಿಯೊಡನೆ ವಾಸವಾಗಿದ್ದು, ಪತ್ನಿ ಮತ್ತು ಮಕ್ಕಳು ಮುಂಬೈಯಲ್ಲಿ ನೆಲೆಸಿದ್ದರು.
ಕಳೆದ ಕೆಲ ದಿನಗಳ ಹಿಂದೆ ತಾಯಿ ಕಿನ್ನಿಗೋಳಿಯಲ್ಲಿರುವ ತಂಗಿ ಮನೆಗೆ ಹೋಗಿದ್ದು ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲಿ ಆತ್ಮಹತ್ಯೆಗೆ ಸಾಲ ಬಾಧೆ ಕಾರಣ ಎಂದು ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
09/11/2020 12:27 pm