ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಂಜಾಲಕಟ್ಟೆ: ಅಕ್ರಮ ಮರ ಸಾಗಾಟ; ಓರ್ವನ ಬಂಧನ

ಬೆಳ್ತಂಗಡಿ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಲಸು ಮತ್ತು ವಿವಿಧ ಜಾತಿಯ 35 ಮರಗಳ ದಿಮ್ಮಿಗಳನ್ನು ಬೆಳ್ತಂಗಡಿ ವಲಯ ಅರಣ್ಯಾಧಿ ಕಾರಿ ತ್ಯಾಗರಾಜ್ ಹೆಚ್.ಎಸ್. ನೇತೃತ್ವದ ತಂಡ ಪುಂಜಾಲಕಟ್ಟೆ ಬಳಿ ಪತ್ತೆ ಹಚ್ಚಿ ಓರ್ವನನ್ನು ಬಂಧಿಸಿದೆ.

ಪ್ರಕರಣದ ಸಂಬಂಧ ಬಂಟ್ವಾಳ ಮೊಗರ್ನಾಡು ಶೇಡಿಗುರಿ ಎಳಬೆಬೈಲು ನಿವಾಸಿ ವಾಮನ ಎಂಬಾತನನ್ನು ಬಂಧಿಸಿ ಸುಮಾರು 15 ಲಕ್ಷ ರೂ.‌ ಮೌಲ್ಯದ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದಿದೆ.

ಬಳಿಕ ಕೋರ್ಟ್ ಗೆ ಹಾಜರು ಪಡಿಸಿದ್ದು, ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ವಾಮನ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಮಾಲಕ ಬಂಟ್ವಾಳ ನಿವಾಸಿ ಕಿರಣ್ ಕುಮಾರ್ ಮೇಲೂ ಪ್ರಕರಣ ದಾಖಲಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

07/11/2020 10:53 am

Cinque Terre

7.83 K

Cinque Terre

0

ಸಂಬಂಧಿತ ಸುದ್ದಿ