ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ನಾಪತ್ತೆಯಾದ ಯುವಕನ ಶವ ಹೊಸಮಠ ಹೊಳೆಯಲ್ಲಿ ಪತ್ತೆ

ಕಡಬ: ಎರಡು ದಿನಗಳ ಹಿಂದೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದ ಯುವಕನ ಶವ ಹೊಸಮಠ ಹೊಳೆಯಲ್ಲಿ ಗುರುವಾರ ಪತ್ತೆಯಾಗಿದೆ.

ಕುಟ್ರುಪಾಡಿ ಗ್ರಾಮದ ಹೊಸಮಠ ಚೆವುಡೇಲು ನಿವಾಸಿ ಪೊಡಿಯ ಎಂಬವರ ಅವಿವಾಹಿತ ಪುತ್ರ ದಿನೇಶ್ ಎಂಬವರು ಮನೆಯಿಂದ ನಾಪತ್ತೆಯಾಗಿದ್ದರು. ವಿಷಯ ತಿಳಿದ ಮನೆಯವರು ವಿವಿಧ ಕಡೆಗಳಲ್ಲಿ ಹುಡುಕಾಡಿದರೂ ದಿನೇಶ್ ಅವರ ಸುಳಿವು ಪತ್ತೆಯಾಗಿರಲಿಲ್ಲ.

ಇದೀಗ ಹೊಸಮಠ ಹೊಳೆಯ ರಾಮಕಲ್ಲು ಎಂಬಲ್ಲಿ ಮೃತ ದೇಹ ಪತ್ತೆಯಾಗಿದೆ. ದಿನೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ಕಡಬ ಪೊಲೀಸರ ಸಮ್ಮುಖದಲ್ಲಿ ಕಡಬ ಸಮುದಾಯ ಆಸ್ಪತ್ರೆಗೆ ತರಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

Edited By :
Kshetra Samachara

Kshetra Samachara

08/10/2020 04:56 pm

Cinque Terre

26.56 K

Cinque Terre

0

ಸಂಬಂಧಿತ ಸುದ್ದಿ