ಸಾಗರ: ಆಮೆ ಮತ್ತು ಮಣ್ಣುಮುಕ್ಕ ಹಾವು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಅರಣ್ಯ ಸಂಚಾರ ದಳ ವಶಕ್ಕೆ ಪಡೆದಿದೆ.
ಕಾನೂನು ಬಾಹಿರವಾಗಿ ಆಮೆ ಮತ್ತು ಮಣ್ಣುಮುಕ್ಕ ಹಾವಿನ ಮಾರಾಟದಲ್ಲಿ ತೊಡಗಿದ್ದ ಶಿವಮೊಗ್ಗ ತಾಲೂಕಿನ ವೀರಗಾರನ ಬೈರಕೊಪ್ಪದ ರಮೇಶ್, ರಾಣಿಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದ ಜಗದೀಶ್, ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮದ ಹರೀಶ್ ಹಾಗೂ ಹೊಸನಗರ ತಾಲೂಕು ಹಾಲುಗುಡ್ಡೆ-ಬಾಳೂರು ಗ್ರಾಮದ ನಾಗೇಂದ್ರ ಅವರನ್ನು ಅರಣ್ಯ ಸಂಚಾರ ದಳ ಮಾಲು ಸಹಿತ ವಶಕ್ಕೆ ಪಡೆದು ಅರಣ್ಯ ಇಲಾಖೆಗೆ ಒಪ್ಪಿಸಿದೆ.
Kshetra Samachara
04/11/2020 09:44 pm