ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ ಬಾಂಬೆ ಬಜಾರ್‌ನಲ್ಲಿ ಕಳವು: ಕಾಸರಗೋಡು ಮೂಲದ ಆರೋಪಿ ಸೆರೆ

ಮುಲ್ಕಿ: ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಇಮ್ತಿಯಾಜ್ ಮಾಲೀಕತ್ವದ ಬಾಂಬೆ ಬಜಾರ್ ಅಂಗಡಿಯಲ್ಲಿ ಸಾವಿರಾರು ರೂ. ಮೌಲ್ಯದ ಬಟ್ಟೆಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯನ್ನು ಕೇರಳದ ಕಾಸರಗೋಡಿನ ಮಾಯಿಪ್ಪಾಡಿ ನಿವಾಸಿ ರಾಜೇಶ್ ರೈ (37) ಎಂದು ಗುರುತಿಸಲಾಗಿದೆ. ಆರೋಪಿಯು ಮುಲ್ಕಿ, ಕಿನ್ನಿಗೋಳಿ ಪರಿಸರದಲ್ಲಿ ಇಂಟರ್ ಲಾಕ್ ಕೆಲಸ ಮಾಡುತ್ತಿದ್ದು, ಅಂಗಡಿ ನೋಡಿಕೊಂಡೇ ಈ ಕೃತ್ಯ ನಡೆಸಿದ್ದಾನೆ. ಆರೋಪಿಯು ಅಂಗಡಿಯ ಹಿಂಭಾಗದ ತಗಡಿನ ಶೀಟುಗಳನ್ನು ಎಬ್ಬಿಸಿ ಒಳಗೆ ಹೋಗಿ, ಕಳವು ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಕಳುವು ಮಾಡಿದ ಬಟ್ಟೆಗಳನ್ನು ಕಾಸರಗೋಡು ಸಮೀಪದ ಕುಂಬಳೆ ಪೇಟೆಯ ಬಟ್ಟೆ ಅಂಗಡಿಯೊಂದಕ್ಕೆ ಮಾರಾಟ ಮಾಡಿದ್ದಾನೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನಿಂದ ಸುಮಾರು ೫೦ ಸಾವಿರ ರೂ. ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

04/11/2020 07:25 pm

Cinque Terre

5.9 K

Cinque Terre

0

ಸಂಬಂಧಿತ ಸುದ್ದಿ