ಬ್ರಹ್ಮಾವರ: ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹೊಸೂರು ಗ್ರಾಮದ ಕೆಳ ಕರ್ಜೆಯಲ್ಲಿರುವ “ವಿನಾಯಕ ಕ್ಯಾಶೂ" ಗೇರು ಬೀಜದ ಕಾರ್ಖಾನೆಯಲ್ಲಿ ಕಳ್ಳತನ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇದೇ ಆರೋಪಿಗಳು ವಿಜಯದುರ್ಗಾ ಎಂಬ ಗೇರು ಬೀಜ ಕಾರ್ಖಾನೆಯ ಶಟರ್ ಮುರಿದು ಇದೇ ರೀತಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಸೈಯದ್ ಮೊಹಮ್ಮದ್ ಬಶೀರ್( 37) ಮತ್ತು ಉಮ್ಮರ್ ಫಾರೂಕ್ (36) ಬಂಧಿತರು.
ಬಂಧಿತರಿಂದ 10 ಕೆ.ಜಿ. ತೂಗುವ ಒಂದು ಡಬ್ಬದಂತೆ ಒಟ್ಟು 32 ಗೇರುಬೀಜ ಡಬ್ಬಗಳನ್ನು ವಶಕ್ಜೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ 1,40,000 ರೂ. ವಾಗಿದ್ದು, ಈ ಆರೋಪಿಗಳ ವಿರುದ್ದ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ಮತ್ತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಇದೇ ಮಾದರಿಯ ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಗಳಿಂದ ಒಂದು ಕಾರು, 3 ಮೊಬೈಲ್ ಕೂಡ ವಶಪಡಿಸಲಾಗಿದೆ.
Kshetra Samachara
29/10/2020 11:37 pm