ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಬಾಲಕಿ ಮೇಲೆ ಲೈಂಗಿಕ‌ ದೌರ್ಜನ್ಯ; ಓರ್ವ ಬಂಧನ

ಬೆಳ್ತಂಗಡಿ: ವ್ಯಕ್ತಿಯೋರ್ವ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ಎಂಬಲ್ಲಿ ನಡೆದಿದೆ.

ಘಟನೆ ಸಂಬಂಧ ನಾವೂರು ನಿವಾಸಿ ಜನಾರ್ದನ ಪೂಜಾರಿ ( 42) ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

14ರ ಹರೆಯದ ಬಾಲಕಿಯನ್ನು ಆರೋಪಿ ಜನಾರ್ದನ ಅ.22 ರಂದು ಪುಸಲಾಯಿಸಿ ಮದ್ದಡ್ಕದಲ್ಲಿರುವ ತನ್ನ ಸ್ವೇಹಿತನ ಮನೆಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದ.

ಈ ಬಗ್ಗೆ ಬಾಲಕಿ ಅ. 26 ರಂದು ಮನೆಯವರಿಗೆ ಮಾಹಿತಿ ನೀಡಿದ್ದು, ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ದೂರು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ

Edited By : Nirmala Aralikatti
Kshetra Samachara

Kshetra Samachara

28/10/2020 11:50 am

Cinque Terre

12.48 K

Cinque Terre

4

ಸಂಬಂಧಿತ ಸುದ್ದಿ