ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ: ಜತೆಗಾರನಿಗೆ ಹುಡುಕಾಟ

ಬಂಟ್ವಾಳ: ಬಂಟ್ವಾಳದ ಅಪಾರ್ಟ್ ಮೆಂಟ್ ನಲ್ಲಿ ಕೊಲೆಗೀಡಾಗಿದ್ದ ಸುರೇಂದ್ರ ಬಂಟ್ವಾಳ್ (39) ಅವರನ್ನು ಯಾರು ಹತ್ಯೆ ಮಾಡಿದರು ಮತ್ತು ಯಾಕಾಗಿ ಹತ್ಯೆ ಮಾಡಿದರು ಎಂಬ ಕುರಿತು ಆಡಿಯೋ ದಲ್ಲಿರುವ ಧ್ವನಿ ಕುರಿತು ತನಿಖೆ ನಡೆಯುತ್ತಿದೆ.

ಅವರ ನಿಕಟವರ್ತಿ ಎನ್ನಲಾದ ಸತೀಶ್ ಎಂಬಾತನ ಹುಡುಕಾಟವೂ ಸಾಗಿದ್ದು, ಸತೀಶ್ ಜೊತೆ ಯಾರಿದ್ದರು ಎಂಬುದು ಆತನನ್ನು ವಿಚಾರಣೆಗೆ ಒಳಪಡಿಸಿದ ಮೇಲಷ್ಟೇ ಗೊತ್ತಾಗಬೇಕಿದೆ ಎಂದು ಬಂಟ್ವಾಳ ಪೊಲೀಸರು ಹೇಳಿದ್ದಾರೆ.

ಈಗ ವಿವಿಧ ತಂಡಗಳಲ್ಲಿ ತನಿಖೆ ಬಿರುಸಿನಿಂದ ನಡೆಯುತ್ತಿದೆ. ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸ ತಮಗಿದೆ. ಆಗಲಷ್ಟೇ ಹತ್ಯೆಗೆ ನಿಖರ ಕಾರಣದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದವರು ತಿಳಿಸಿದ್ದಾರೆ.

ಬುಧವಾರ ಸುರೇಂದ್ರ ಬಂಟ್ವಾಳ್ ಅವರನ್ನು ಹತ್ಯೆ ಮಾಡಲಾಗಿತ್ತು. ಸುರೇಂದ್ರ ಬಂಟ್ವಾಳ್ ಇದ್ದ ಫ್ಲ್ಯಾಟ್ ಗೆ ಅವರ ನಿಕಟವರ್ತಿ ಎನ್ನಲಾದ ಸತೀಶ್ ಮತ್ತು ಇನ್ನೊಬ್ಬ ವ್ಯಕ್ತಿ ಬಂದಿದ್ದಾನೆ ಎನ್ನಲಾಗಿದ್ದು, ಬಳಿಕ ಆತನ ಧ್ವನಿಯಲ್ಲಿ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸರು, ಸದ್ಯಕ್ಕೆ ತಲೆಮರೆಸಿಕೊಂಡಿರಬಹುದು ಎಂದು ಶಂಕಿಸಲಾದ ಸತೀಶ್ ನ ಹುಡುಕಾಟದಲ್ಲಿದ್ದು, ಆತನ ವಿಚಾರಣೆ ಬಳಿಕವಷ್ಟೇ ಪ್ರಕರಣದ ಸ್ಪಷ್ಟ ಚಿತ್ರಣ ನೀಡಲು ಸಾಧ್ಯ ಎಂದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

24/10/2020 10:11 pm

Cinque Terre

13.58 K

Cinque Terre

0

ಸಂಬಂಧಿತ ಸುದ್ದಿ