ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಹಾರ್ಡ್‌ವೇರ್‌ ಅಂಗಡಿಯಲ್ಲಿ ಕಳವು; ಆರೋಪಿ ಬಂಧನ

ವಿಟ್ಲ: ಇಲ್ಲಿನ ಕಸಬಾದ ಮಾರ್ನಮಿಗುಡ್ಡೆ ಎಂಬಲ್ಲಿರುವ ಹಾರ್ಡ್ ವೇರ್‌ ಅಂಗಡಿಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ತಾಲೂಕಿನ ಬಜ್ಪೆ ಕೊಂಚಾರು ನಿವಾಸಿ ಮಹಮ್ಮದ್ ರಫೀಕ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ವಿಟ್ಲ ಕಸಬಾದ ಮಾರ್ನಮಿಗುಡ್ಡೆ ಚರ್ಚ್ ಬಳಿಯ ರಾಕೇಶ್ ಶೆಟ್ಟಿ ಎಂಬವರಿಗೆ ಸೇರಿದ ರಿಧ್ವಿ ಹಾರ್ಡವೇರ್ ಅಂಗಡಿಗೆ ದ್ವಿಚಕ್ರದಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಅಂಗಡಿಯಲ್ಲಿದ್ದ 17 ಸಾವಿರ ರೂ. ಕಳವುಗೈದು ಪರಾರಿಯಾಗಿದ್ದ. ಈ ಸಂಬಂಧ ರಾಕೇಶ್ ಶೆಟ್ಟಿಯವರು ವಿಟ್ಲ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ವಿಟ್ಲ ಠಾಣೆಯ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಾಧ್ಯಮ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದು, ಆತನ ಬಳಿ ಮಾಧ್ಯಮ ಸಂಸ್ಥೆಯ ಐಡಿ ಕಾರ್ಡ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

21/10/2020 11:31 pm

Cinque Terre

10.52 K

Cinque Terre

0

ಸಂಬಂಧಿತ ಸುದ್ದಿ