ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವ್ಯವಸ್ಥಿತ ಸರಣಿ ಕೊಲೆಯತ್ನ ಪ್ರಕರಣ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ- ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಮಂಗಳೂರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ವ್ಯವಸ್ಥಿತ ಸರಣಿ ಕೊಲೆಯತ್ನ ಪ್ರಕರಣಗಳು ವರದಿಯಾಗಿವೆ. ಈ ಸಂಬಂಧ ಉನ್ನತ ಮಟ್ಟದ ತನಿಖೆಗೆ ನಡೆಸುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಇಜಾಝ್ ಅಹ್ಮದ್, 'ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಇಬ್ಬರು ಯುವಕರಾದ ಕಿನ್ನಿಗೋಳಿಯ ನೌಶಾದ್ ಹಾಗೂ ಮುಹಮ್ಮದ್ ಶರೀಫ್ ಆಲಾಡಿ ಮೇಲೆ ಒಂದೇ ತಂಡವು ಕೊಲೆಗೆ ಯತ್ನ ನಡೆಸಿ ವಿಫಲವಾಗಿತ್ತು. ಈ ಬೆನ್ನಲ್ಲೇ ತಾಲೂಕು ಪಂಚಾಯತಿ ಮಾಜಿ ಸದಸ್ಯ ಯೂಸುಫ್ ಎಂಬವರ ಮೇಲೆ ದಾಳಿ ನಡೆಸಿ ಕೊಲೆ ಯತ್ನಿಸಿತ್ತು' ಎಂದು ಹೇಳಿದರು.

ಈ ಎರಡೂ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳೆಲ್ಲರೂ ಸಂಘ ಪರಿವಾರದ ಕಾರ್ಯಕರ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘ ಪರಿವಾರವು ಮುಸ್ಲಿಮ್ ಯುವಕರ ಹತ್ಯೆ ನಡೆಸಿ ಜಿಲ್ಲೆಯಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದೆ ಎಂಬುದು ಬಹಳ ಸ್ಪಷ್ಟವಾಗಿದೆ' ಎಂದು ಇಜಾಝ್ ಅಹ್ಮದ್ ಆರೋಪಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

20/10/2020 04:32 pm

Cinque Terre

9.89 K

Cinque Terre

0

ಸಂಬಂಧಿತ ಸುದ್ದಿ