ಮಂಗಳೂರು: ಮನೀಶ್ ಶೆಟ್ಟಿ ಕೊಲೆ ಪ್ರಕರಣಕ್ಕೆ ದೂರವಾಣಿ ಕರೆಯಲ್ಲಿ ನಡೆದ ಸಂಭಾಷಣೆ ರೋಚಕ ಟ್ವಿಸ್ಟ್ ನೀಡಿದೆ.
ಹೌದು. ದಾಯ್ಜಿವಲ್ಡ್ ದೂರವಾಣಿ ಕರೆ ಮಾಡಿದ್ದ ವಿಕ್ಕಿ ಶೆಟ್ಟಿ, 'ಬೆಂಗಳೂರಿನಲ್ಲಿ ನಡೆದ ಮನೀಶ್ ಶೆಟ್ಟಿ ಕೊಲೆ ಮಾಡಿಸಿದ್ದು ನಾನೇ. ಕಿಶನ್ ಹೆಗ್ಡೆ ಕೊಲೆಗೆ ಮನೀಶ್ ಶೆಟ್ಟಿ ಸಹಕಾರ ನೀಡಿದ್ದ. ಹೀಗಾಗಿಯೇ ಆತನನ್ನು ನಮ್ಮ ತಂಡ ಕೊಲೆಗೈದಿದೆ' ಎಂದು ಹೇಳಿದ್ದಾರೆ.
'ಕಿಶನ್ ಹೆಗ್ಡೆ ಕೊಲೆಗೆ ಈ ಕೊಲೆ ರಿವೇಂಜ್ ಅಲ್ಲವೆಂದು ನಾನು ಹೇಳಿಲ್ಲ. ಕೋಡಿಕೆರೆ ಮನೋಜ್ ಹಾಗೂ ನಮಗೂ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಆದರೆ ಅವನು ಕಿಶನ್ ಹೆಗ್ಡೆ ಮರ್ಡರ್ ಮಾಡಿದ್ದು ದೊಡ್ಡ ತಪ್ಪು ಎಂದು ಹೇಳಿದ್ದೆ. ಆದರೆ ಪತ್ರಕರ್ತರೊಬ್ಬರು ಬೇರೆ ರೀತಿ ಅರ್ಥೈಸಿಕೊಂಡು ಅದನ್ನು ಸುದ್ದಿ ಮಾಡಿದ್ದಾರೆ' ಎಂದು ವಿಕ್ಕಿ ಶೆಟ್ಟಿ ಹೇಳಿದ್ದಾರೆ.
Kshetra Samachara
19/10/2020 06:25 pm