ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಕೋಲಾ: ಹಲವೆಡೆ ನಗದು, ಸೊತ್ತು ಲಪಟಾಯಿಸಿದ ನಾಲ್ವರ ಬಂಧನ

ಅಂಕೋಲಾ: ಕಳೆದ ಒಂದು ವಾರದ ಹಿಂದೆ ಪಟ್ಟಣದ ಹುಲಿದೇವರವಾಡದ ಎಪಿಎಂಸಿ ಮೈದಾನದ ಎದುರಿನ ಮನೆ ಹಾಗೂ ಕೇಬಲ್ ನೆಟ್‌ವರ್ಕ್ ಕಚೇರಿಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಇಲ್ಲಿಯ ಪೊಲೀಸರು ಶನಿವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನವನಗರದ ಇಮ್ರಾನ್ ಮಕ್‌ಬೂಲ್ ಬ್ಯಾಡಗಿ (23), ಬಸವರಾಜ್ ನಾಗಪ್ಪ ವಡ್ಡರ್ (23), ಮಲ್ಲಿಕ್ ಅಬ್ದುಲ್ ರಜಾಕ ದೊಡ್ಮನಿ (19) ಹಾಗೂ ಗೋವಾ ಮಡಗಾಂವನಲ್ಲಿ ವಾಸಿಸುತ್ತಿರುವ ಮುಬಾರಕ್ ಅಬ್ದುಲ್ ಮುನಾಫ್ ಸಾಬ್ ಶೇಖ್ ಸನದಿ (21) ಇವರನ್ನು ಬಂಧಿಸಿರುವ ಪೊಲೀಸರು, ಅವರಿಂದ 50 ಸಾವಿರ ರೂ. ಮೌಲ್ಯದ ಫೈರ್ ಹೋಲ್ ಮೆಷಿನ್, ಜಿಯೋ ವೈಫೈ ಸಲಕರಣೆ, 20 ಸಾವಿರ ರೂ. ನಗದು ಮತ್ತು ಕಳ್ಳತನಕ್ಕೆ ಬಳಸಿದ್ದ ಐ20 ಕಾರನ್ನು ವಶಕ್ಕೆ ಪಡೆದುಕೊಂಡು ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಎಸ್‌ಪಿ ಶಿವಪ್ರಕಾಶ ದೇವರಾಜು, ಎಎಸ್ಪಿ ಬದರೀನಾಥ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಅರವಿಂದ ಕಲ್ಲಗುಜ್ಜಿ ಸೂಚನೆ ಮೇರೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣಾನಂದ ನಾಯಕ ಮತ್ತು ಪಿಎಸ್‌ಐ ಇ.ಸಿ. ಸಂಪತ್, ಎಎಸ್‌ಐ ಅಶೋಕ ತಳಗಪ್ಪನವರ್ ಮತ್ತು ಸಿಬ್ಬಂದಿ ಮಂಜುನಾಥ ಲಕ್ಮಾಪುರ, ಆಶೀಪ್ ಕುಂಕೂರು, ಶ್ರೀಕಾಂತ ಕಟಬರ, ಸಂತೋಷಕುಮಾರ, ಸುರೇಶ ಬಿ., ಮನೋಜ್, ಚಾಲಕರಾದ ಸತೀಶ ನಾಯ್ಕ, ಜಗದೀಶ ನಾಯ್ಕ, ಯಲ್ಲಾಪುರ ಠಾಣೆಯ ಮಹಮ್ಮದ್ ಶಫಿ ಶೇಖ್, ಶಿರಸಿ ನಗರ ಠಾಣೆಯ ಕೊಟ್ರೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Edited By : Nirmala Aralikatti
Kshetra Samachara

Kshetra Samachara

17/10/2020 11:02 pm

Cinque Terre

7.48 K

Cinque Terre

0

ಸಂಬಂಧಿತ ಸುದ್ದಿ