ಬಂಟ್ವಾಳ : ಯುವಕನೊಬ್ಬ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಬೇರೆ ಯುವತಿ ಜೊತೆ ಮದುವೆಯಾಗಿರುವುದರಿಂದ ನೊಂದ ಯುವತಿಯು ಮದುವೆಯ ದಿನವೇ ಯುವಕನ ಮೇಲೆ ಲೈಂಗಿಕ ಪ್ರಕರಣ ದಾಖಲಿಸಿದ್ದಾರೆ.
ಪಾಣೆಮಂಗಳೂರು ಸಮೀಪ ನಿವಾಸಿ ನಾಸೀರ್ ಆರೋಪಿಯಾಗಿದ್ದು, ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ.
ಬಳಿಕ ಬೆದರಿಕೆ ಹಾಕಿದ್ದು, ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದಾಗಿ ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.
ಯುವಕ ವಿವಾಹವಾದ ವಿಷಯ ತಿಳಿದ ಯುವತಿ, ವಿಟ್ಲ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
Kshetra Samachara
13/10/2020 05:35 pm