ಸುಳ್ಯ: ನಗರದಲ್ಲಿ ಸೋಮವಾರ ರಾತ್ರಿ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು ಕಂಪ್ಯೂಟರ್ ಸಹಿತ ನಗದು ಕಳವು ಮಾಡಿದ್ದಾರೆ.
ಸುಳ್ಯ ಎಪಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿರುವ ಲೋಕೇಶ್ ಕೆರೆಮೂಲೆಯವರ ಮಾಲೀಕತ್ವದ ಗಣೇಶ್ ಟೆಲಿಕಾಂನಿಂದ ಕಂಪ್ಯೂಟರ್ ಸೆಟ್, ಮೊಬೈಲ್, 5 ಸಾವಿರ ರೂ.ನಗದು, ಅಂಗಡಿಯಲ್ಲಿದ್ದ ಡ್ರೈ ಫ್ರೂಟ್ಸ್ ಹಾಗೂ ಇನ್ನಿತರ ವಸ್ತುಗಳು ಕಳ್ಳತನವಾಗಿದೆ. ಅದೇ ರೀತಿ ಸುಳ್ಯ ಜೂನಿಯರ್ ಕಾಲೇಜ್ ಬಳಿ ಸ್ಟೇಶನರಿ ಅಂಗಡಿಯಿಂದ ನಗದು ಹಾಗೂ ದಿನಸಿ ನಿನ್ನೆ ರಾತ್ರಿ ವೇಳೆ ಕಳವುಗೈಯಲಾಗಿದೆ ಎಂದು ಇಂದು ಮುಂಜಾನೆ ತಿಳಿದು ಬಂದಿದೆ. ಮುಂಜಾನೆ ಎಂದಿನಂತೆ ಅಂಗಡಿ ಮಾಲೀಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸುಳ್ಯ ಠಾಣೆಯ ಪೊಲೀಸರು ಬಂದು ಮಹಜರು ನಡೆಸಿದರು.
Kshetra Samachara
13/10/2020 11:57 am