ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗ್ಳೂರು ವಿವಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಕೇಸ್: ಮಹಿಳಾ ಆಯೋಗಕ್ಕೆ ತನಿಖಾ ವರದಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ ಪ್ರೊಫೆಸರ್ ಒಬ್ಬರು ನಡೆಸಿದ ಲೈಂಗಿಕ ಅತ್ಯಾಚಾರ ತನಿಖಾ ವರದಿ ಸದ್ಯ ರಾಜ್ಯ ಮಹಿಳಾ ಆಯೋಗದ ಕೈಸೇರಿದೆ ಎನ್ನಲಾಗಿದೆ.

ವಿವಿ ಅರ್ಥಶಾಸ್ತ್ರ ವಿಭಾಗದ ಪ್ರೊ.ಆರಬಿ ಎಂಬವರು ಮೂರು ವರ್ಷದ ಹಿಂದೆ ತರಗತಿ ಕೊಠಡಿಯಲ್ಲಿ ಯಾರೂ ಇಲ್ಲದಿದ್ದಾಗ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ವಿಶ್ವ ವಿದ್ಯಾಲಯಕ್ಕೆ ದೂರು ನೀಡಿದ್ದಳು. ಆದರೆ ದೂರಿನ ಬಗ್ಗೆ ವಿಚಾರಣೆ ನಡೆಸುವ ಬದಲು ಅಂದಿನ ಕುಲಸಚಿವ ಡಾ. ಎ.ಎಂ. ಖಾನ್‌ ಘಟನೆಯನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದರು. ಇದರಿಂದಾಗಿ ವಿದ್ಯಾರ್ಥಿನಿ ನೇರವಾಗಿ ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿದ್ದಳು. ತಕ್ಷಣ ಸ್ಪಂದಿಸಿದ ಮಹಿಳಾ ಆಯೋಗ ವಿಶ್ವವಿದ್ಯಾಲಯದಿಂದ ವರದಿ ಕೇಳಿತ್ತು. ಈ ಸಂದರ್ಭ ಎಚ್ಚೆತ್ತುಕೊಂಡ ವಿಶ್ವವಿದ್ಯಾಲಯ ಆಂಗ್ಲಭಾಷಾ ವಿಭಾಗದ ಪ್ರಾಧ್ಯಾಪಕಿ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯೊಂದನ್ನು ನೇಮಿಸಿ ತನಿಖೆಗೆ ಆದೇಶ ನೀಡಿತ್ತು.

ತನಿಖಾ ಸಮಿತಿಯು 2018ರ ಡಿಸೆಂಬರ್‌ನಲ್ಲಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯ ಹೇಳಿಕೆಯನ್ನು ದಾಖಲಿಸಿ ಲೈಂಗಿಕ ದೌರ್ಜನ್ಯ ನಡೆದಿರುವುದು ಹೌದು ಎಂದು ಉಲ್ಲೇಖಿಸಿ ವಿಶ್ವವಿದ್ಯಾಲಯಕ್ಕೆ ವರದಿ ಸಲ್ಲಿಸಿತ್ತು. ಆದರೆ ಡಾ. ಎ.ಎಂ.ಖಾನ್‌ ಅವರು ವರದಿಯನ್ನು ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸದೆ ಕಚೇರಿಯ ಕಪಾಟಿನಲ್ಲಿ ಇಟ್ಟು ಎಡವಟ್ಟು ಮಾಡಿಕೊಂಡಿದ್ದರು.

ರಾಜ್ಯ ಮಹಿಳಾ ಆಯೋಗ ವರದಿ ಕೇಳಿದ ಹಿನ್ನೆಲೆಯಲ್ಲಿ ನೂತನ ಕುಲಸಚಿವ ರಾಜು ಮೊಗವೀರ ತನಿಖಾ ವರದಿಯನ್ನು ಸಿಂಡಿಕೇಟ್ ಸಮಿತಿ ಮುಂದಿರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

Edited By : Vijay Kumar
Kshetra Samachara

Kshetra Samachara

12/10/2020 04:57 pm

Cinque Terre

5.8 K

Cinque Terre

0

ಸಂಬಂಧಿತ ಸುದ್ದಿ