ಮುಲ್ಕಿ : ಮುಲ್ಕಿ ಅಕ್ಕಸಾಲಿಗರ ಕೇರಿ ಬಳಿಯ ಪುರಾತನ ಮಾರಿಯಮ್ಮ ನವರ ದೇವಸ್ಥಾನ, ಸಹಿತ ಸಮೀಪದ ಮೂಕಾಂಬಿಕಾ ಮಂದಿರದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳ ಸರಣಿ ಕಳ್ಳತನ ಭಾನುವಾರ ರಾತ್ರಿ ನಡೆದಿದೆ.
ಮಾರಿಗುಡಿ ದೇವಸ್ಥಾನಕ್ಕೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು ಬೀಗ ಮುರಿದು ಕಬ್ಬಿಣದ ಸರಪಳಿ ತುಂಡರಿಸಿ ಚಿನ್ನಾಭರಣಗಳ ಹೊತ್ತೋಯ್ದಿದ್ದಾರೆ.
ಕಳ್ಳರು ಮಾರಿಗುಡಿ ಹಿಂಭಾಗದಲ್ಲಿ ಬಾಳೆಗಿಡವನ್ನು ಕತ್ತರಿಸಿದ್ದು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಲಾಗಿದೆ.
ಬಳಿಕ ಕಳ್ಳರು ಸಮೀಪದಲ್ಲಿರುವ ಕೆಳಗಿನಮನೆ ರಘುವೀರ ಕೋಟ್ಯಾನ್ ಎಂಬವರ ಮೂಕಾಂಬಿಕಾ ಮಂದಿರ ದಲ್ಲಿಯೂ ತಮ್ಮ ಕೈ ಚಳಕ ತೋರಿದ್ದಾರೆ.
Kshetra Samachara
12/10/2020 10:03 am