ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನಲ್ಲಿ ಒಂಟಿ ಮಹಿಳೆಯ ಹತ್ಯ ಕೇಸ್ : ಪೊಲೀಸರು ಕೊಟ್ಟ ಮಾಹಿತಿ ಏನು?

ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಬಾಳೆಪುಣಿಯ ಕಣಂತೂರಿನ ಬಾಳೆಪುಣಿಯಲ್ಲಿ ಸೆ. 25ರಂದು ನಡೆದ ಒಂಟಿ ಮಹಿಳೆಯೋರ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸೆ. 25ರಂದು ಕುಸುಮಾ (50) ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಇವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿದ್ದಾರೆ ಎಂದು ಶಂಕಿಸಲಾಗಿತ್ತು.

ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲವು ಮಹತ್ವದ ಮಾಹಿತಿಗಳು ದೊರೆತಿದ್ದು, ಐದು ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ತನಿಖೆ ಮಾಡಲು ಮೂರು ತಂಡಗಳನ್ನು ರಚಿಸಲಾಗಿದ್ದು, ತನಿಖೆಯಲ್ಲಿ ಮಹಿಳೆಯ ಮೇಲೆ ನಡೆದ ಹೀನ ಕೃತ್ಯದಲ್ಲಿ ಕತರ್ನಾಕ್ ಗ್ಯಾಂಗ್ವೊಂದರ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ನೆಹರೂ ಮೈದಾನದಲ್ಲಿ ವಾಸವಿರುವ ತಂಡವೊಂದು ಈ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗಿದೆ.

ಈ ಐದು ಜನರ ತಂಡದಲ್ಲಿದ್ದ ಓರ್ವನಿಗೆ ಕೊಣಾಜೆ ಠಾಣಾ ವ್ಯಾಪ್ತಿಯ ತೋಟದ ಮನೆಯಲ್ಲಿ ಒಂಟಿ ಮಹಿಳೆ ವಾಸ ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿದಿದ್ದು, ಹಾಗಾಗಿ ಈ ಐದು ಜನರ ತಂಡವು ಮಹಿಳೆಯ ಮನೆಯ ಮೇಲೆ ದಾಳಿ ಮಾಡಿ, ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಚಿನ್ನಾಭರಣ ಕಳವು ಮಾಡಿ, ಕರ್ಟನ್ ಗೆ ಬೆಂಕಿ ಹಾಕಿ ಗ್ಯಾಸ್ ಸ್ಟವ್ ಒಡೆದ ಕಾರಣ ಮಹಿಳೆ ಮೃತಪಟ್ಟಿದ್ದಾರೆ ಎನ್ನುವ ರೀತಿಯಲ್ಲಿ ಕೃತ್ಯವನ್ನು ಬಿಂಬಿಸಿ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯ ವೇಳೆ ಮಾಹಿತಿ ತಿಳಿದುಬಂದಿದೆ.

Edited By : Nirmala Aralikatti
Kshetra Samachara

Kshetra Samachara

09/10/2020 10:32 pm

Cinque Terre

8.5 K

Cinque Terre

0

ಸಂಬಂಧಿತ ಸುದ್ದಿ