ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನಲ್ಲಿ ಗಾಂಜಾ ಸೇವನೆ - 6 ಆರೋಪಿಗಳ ಅಂದರ್

ಮಂಗಳೂರು : ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಇವರ ನಿರ್ದೇಶನದಂತೆ ಗಾಂಜಾ ಸೇವನೆ ಮಾಡುತ್ತಿದ್ದ ಅಲನ್, ವಿವೇಕ್, ಅಮೃತಾ ವಾಸ್, ಸಚಿನ್, ರೋಹನ್ ಹಾಗೂ ನಭಾ ಎಂಬ ಆರು ಮಂದಿಯನ್ನು ಮಂಗಳೂರಿನ ಅಬಕಾರಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅ.8ರ ಗುರುವಾರದಂದು ಮಂಗಳೂರು ವಲಯ ಕಚೇರಿಯ ಅಬಕಾರಿ ವಲಯ ನಿರೀಕ್ಷಕ ಸೀಮಾ, ಅಬಕಾರಿ ಉಪ ನಿರೀಕ್ಷ ಪ್ರತಿಭಾ.ಜಿ, ಕಮಲಾ ಹೆಚ್.ಎನ್ ಹಾಗೂ ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಸುನಿಲ್ ಬೈಂದೂರ್, ಉಮೇಶ್. ಹೆಚ್, ಕುಮಾರ್, ವಿನೀತ್ ಸಂದೀಪ್ ಕುಮಾರ್ ಹಾಗೂ ಮನ್ ಮೋಹನ್ ಅವರಿದ್ದ ತಂಡವು ಮಂಗಳೂರು ದಕ್ಷಿಣ ವಲಯ -1ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ.

ಬಂಧಿತರಿಂದ ಒಟ್ಟು ಸುಮಾರು 1.50 ಗ್ರಾಂ ಎಂಡಿಎಂಎ ಡ್ರಗ್ಸ್, 100 ಗ್ರಾಂ ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಒಟ್ಟು ಏಳು ಪ್ರಕರಣಗಳು ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

09/10/2020 10:19 pm

Cinque Terre

7.04 K

Cinque Terre

1

ಸಂಬಂಧಿತ ಸುದ್ದಿ